EPF balance check: ಭವಿಷ್ಯದಲ್ಲಿ ಪಿಎಫ್ ಬ್ಯಾಲೆನ್ಸ್ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಲ್ಲಿ ಜನರಿಗೆ ಸಹಾಯ ಆಗುವ ಸಲುವಾಗಿ, ವೇತನ (salary)ಪಡೆಯುವ ವರ್ಗದ ಜನರ ವೇತನದ ಒಂದು ಭಾಗವನ್ನು ಅವರ EPFO ಖಾತೆಯಲ್ಲಿ(account )ಠೇವಣಿ ಮಾಡಿ, ಅದರ ಮೇಲೆ ಸರ್ಕಾರವು(government)ಉತ್ತಮ ಬಡ್ಡಿಯನ್ನು ಪಾವತಿಸುವುದಾಗಿದೆ.
ಈಗಾಗಲೇ 1995 ರಲ್ಲಿ ಹೊಸ ಪಿಂಚಣಿ ಯೋಜನೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಆರಂಭಿಸಲಾಗಿದ್ದು ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶ ನೀಡಲಾಗಿದೆ.
ಅಂದರೆ ಉದ್ಯೋಗ ಮುಕ್ತಾಯ ಅಥವಾ ಮದುವೆ (marriage ) ಮತ್ತು ಗಂಭೀರ ಅನಾರೋಗ್ಯದಂತಹ ಮಹತ್ವದ ಜೀವನ (life ) ಘಟನೆಗಳಲ್ಲಿ ಹಿಂಪಡೆಯಬಹುದು.
ಸದ್ಯ ನಿಮ್ಮ ಉದ್ಯೋಗಿಗಳ ಭವಿಷ್ಯ ನಿಧಿ (EPF) ಬ್ಯಾಲೆನ್ಸ್ (balance) ಪರಿಶೀಲಿಸಲು ನೀವು ಇನ್ನು ಮುಂದೆ EPFO ಕಚೇರಿಗೆ ಅಲೆದಾಡಬೇಕಿಲ್ಲ. ಹೌದು ಭವಿಷ್ಯ ನಿಧಿ (EPF) ಬ್ಯಾಲೆನ್ಸ್ ಪರಿಶೀಲಿಸುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.
ಮುಖ್ಯವಾಗಿ ಭವಿಷ್ಯ ನಿಧಿಯು (EPF Balance check) SMS ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕಳುಹಿಸಬೇಕು. KYC ವಿವರಗಳ ಜೊತೆಗೆ EPFO ಸದಸ್ಯರ ಬ್ಯಾಲೆನ್ಸ್ ವಿವರ ಮತ್ತು ಇತ್ತೀಚಿನ PF ಕೊಡುಗೆಯನ್ನು ಕಳುಹಿಸುತ್ತದೆ. ನಂತರ ಆರಂಭಿಕ ಬಳಕೆದಾರು ನೀವು EPFO ಪೋರ್ಟಲ್ಗೆ ಲಾಗ್ ಇನ್ ಆಗಿ ಮಾಹಿತಿಯನ್ನು (information) ನೀಡಬೇಕು. ಅವಶ್ಯಕತೆಗಳನ್ನು ಅನುಸರಿಸಲು ನಿಮ್ಮ ಆದ್ಯತೆಯ ಭಾಷೆಯ ಮೊದಲ ಮೂರು ಅಕ್ಷರಗಳನ್ನು SMS ನಲ್ಲಿ ಟೈಪ್ ಮಾಡಬೇಕು.
ಕೆಲವೊಮ್ಮೆ ನಿಮ್ಮ ಆಧಾರ್,ಪ್ಯಾನ್ ಮತ್ತು ಬ್ಯಾಂಕ್ ಖಾತೆಯನ್ನು ಕಂಪನಿಯು ಡಿಜಿಟಲ್ ರೂಪದಲ್ಲಿ ಸಲ್ಲಿಸದಿದ್ದ ಸಂದರ್ಭದಲ್ಲಿ ನೀವು ಸಂದೇಶವನ್ನು ಸ್ವೀಕರಿಸದಿರಬಹುದು. ಆದ್ದರಿಂದ ನೀವು SMS ಸ್ವೀಕರಿಸದಿದ್ದರೆ ತಕ್ಷಣವೇ ನಿಮ್ಮ ಪ್ರಸ್ತುತ ಕಂಪನಿಯನ್ನು ಸಂಪರ್ಕಿಸಿ.
ನೀವು EPFO ನೊಂದಿಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಸಂಖ್ಯೆಗೆ ಸಂದೇಶವನ್ನು ಕಳುಹಿಸಬೇಕು. ಇದಕ್ಕಾಗಿ ಸಂದೇಶ ಬಾಕ್ಸ್ ನಲ್ಲಿ ನೀವು ‘EPFOHO UAN’ ಅನ್ನು ನಮೂದಿಸಬೇಕು ಅಂದರೆ ಮೊದಲು EPFOHO ಮತ್ತು ನಂತರ UAN. ಈ ಸೌಲಭ್ಯವು 10 ಭಾಷೆಗಳಲ್ಲಿ ಲಭ್ಯವಿದೆ – ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ಮಲಯಾಳಂ, ಗುಜರಾತಿ, ಮರಾಠಿ, ಕನ್ನಡ, ತೆಲುಗು ಮತ್ತು ಬೆಂಗಾಲಿ. ನೀವು ಇಂಗ್ಲೀಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿ SMS ಬಯಸಿದರೆ, UAN ID ನಂತರ ಅದರ ಮೊದಲ ಮೂರು ಅಕ್ಷರಗಳನ್ನು ಸೇರಿಸಿ. ಉದಾಹರಣೆಗೆ, ನೀವು ಕನ್ನಡದಲ್ಲಿ ಸಂದೇಶವನ್ನು ಬಯಸಿದರೆ, ನೀವು ‘EPFOHO UAN KAN’ ಎಂದು ಬರೆಯಬೇಕು.
ಉದ್ಯೋಗಿ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-220-1406 ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಅಗತ್ಯವಿರುವ ಮಾಹಿತಿಯನ್ನು ಪಡೆಯಬಹುದಾಗಿದೆ. ಉದ್ಯೋಗಿ ಮಿಸ್ಡ್ ಕಾಲ್ ಮಾಡುವ ಮೊದಲು ಉದ್ಯೋಗಿಯ UAN ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು PAN ಸಂಖ್ಯೆಯೊಂದಿಗೆ ಸೀಡ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿರುತ್ತದೆ.
ಇನ್ನು ಜನರು UAN ಕುರಿತು ಯಾರನ್ನು ಸಂಪರ್ಕಿಸಬೇಕು ಮತ್ತು ನಿಮ್ಮ ಗ್ರಾಹಕರ (KYC)ಪ್ರಶ್ನೆಗಳನ್ನು ಹೇಗೆ ತಿಳಿದುಕೊಳ್ಳಬೇಕು? ಕರೆ ಮಾಡುವವರು UAN ಮತ್ತು KYC ಕುರಿತು ಪ್ರಶ್ನೆಗಳೊಂದಿಗೆ EPFO ಟೋಲ್ ಫ್ರೀ ಸಂಖ್ಯೆ 1800 118 005 ಅನ್ನು ಸಂಪರ್ಕಿಸಬಹುದು.
ಈ ಮೇಲಿನಂತೆ ನೀಡಿರುವ ಸಂಖ್ಯೆಗೆ ಕರೆ ಅಥವಾ ಎಸ್‌ಎಂಎಸ್ ಕಳುಹಿಸುವುದರಿಂದ ನಿಮ್ಮ EPF ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದಾಗಿದೆ.
