Home » EPF Tax: ಜನಪ್ರಿಯ ಉಳಿತಾಯ ಯೋಜನೆ EPF ಬಗ್ಗೆ ನಿಮಗೆಷ್ಟು ಗೊತ್ತು ?! ಇಲ್ಲಿದೆ ನೋಡಿ ನಿಯಮಗಳ ವಿವರ

EPF Tax: ಜನಪ್ರಿಯ ಉಳಿತಾಯ ಯೋಜನೆ EPF ಬಗ್ಗೆ ನಿಮಗೆಷ್ಟು ಗೊತ್ತು ?! ಇಲ್ಲಿದೆ ನೋಡಿ ನಿಯಮಗಳ ವಿವರ

0 comments
EPFO Tax

EPF Tax: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ಈ ಮಾಹಿತಿ ಅರಿತಿರುವುದು ಒಳ್ಳೆಯದು. ಸಾಮಾನ್ಯವಾಗಿ ತಿಂಗಳ ವೇತನ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (EPF) ಖಾತೆ ಹೊಂದಿರುವುದು ಕಾಮನ್.

ಇಪಿಎಫ್( EPF)ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಜನಪ್ರಿಯ ಉಳಿತಾಯ ಯೋಜನೆ ಇಪಿಎಫ್ ವೇತನ ಪಡೆಯುವ ನೌಕರರು ತಮ್ಮ ಬೇಸಿಕ್ ಸ್ಯಾಲರಿಯಿಂದ ಶೇಕಡ 12 ರಷ್ಟು ಕಡಿತಗೊಳಿಸುವ ಮೂಲಕ ಪ್ರತಿ ತಿಂಗಳು ಪಿಂಚಣಿ ಕಾರ್ಪಸ್ ಅನ್ನು ರಚಿಸಲಾಗುತ್ತದೆ. ಉದ್ಯೋಗಿಯ ಹಣಕಾಸಿನ ತುರ್ತುಸ್ಥಿತಿಗಳು ಅಥವಾ ವಿವಾಹ, ಭೂಮಿ ಖರೀದಿಸಲು ಅಥವಾ ಮನೆ ನಿರ್ಮಿಸಲು ಹೀಗೆ ಮಹತ್ವಪೂರ್ಣವಾದ ವಿವಿಧ ಉದ್ದೇಶಗಳಿಗಾಗಿ ತಮ್ಮ ಪಿಎಫ್ ಹಣವನ್ನು ಹಿಂಪಡೆಯಲು ನಿಯಮಗಳು(EPF Rules)ಅವಕಾಶ ಕಲ್ಪಿಸುತ್ತದೆ.

ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಗಳಿಗೆ ನೀಡಿದ ನಿಧಿಗಳಿಗೆ ಸಾಮಾನ್ಯವಾಗಿ ತೆರಿಗೆ (EPF Tax)ವಿಧಿಸಲಾಗುವುದಿಲ್ಲ. ಆದರೆ ಹಿಂದಿನ ವರ್ಷದಲ್ಲಿನ ಡೆಪಾಸಿಟ್‌ಗಳ ಮೇಲೆ ಸೆಕ್ಷನ್ 80C ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು ಅವಕಾಶವಿದೆ. ಈ ಸಂದರ್ಭಗಳಲ್ಲಿ, ಸೆಕ್ಷನ್ 80C ಅನ್ನು ಈ ಹಿಂದೆ ಕ್ಲೈಮ್ ಮಾಡದೆ ಇದ್ದಲ್ಲಿ ಹೆಚ್ಚುವರಿ ತೆರಿಗೆ ಅನ್ವಯಿಸಲಿದೆ.

ಉದ್ಯೋಗಿಯು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಂಸ್ಥೆಗಳೊಂದಿಗೆ ಐದು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸುವ ಮೊದಲು ತಮ್ಮ PF ಹಣವನ್ನು ಹಿಂಪಡೆಯಲು ಇಚ್ಚಿಸಿದರೆ, ಟಿಡಿಎಸ್ (Tax Deducted at Source) ಅನ್ವಯವಾಗುತ್ತದೆ. ವಿತ್ ಡ್ರಾ ಮಾಡುವ ಮೊತ್ತವು 50,000 ರೂಪಾಯಿಗಿಂತ ಕಡಿಮೆಯಿದ್ದರೆ ಇಲ್ಲಿ ವಿನಾಯಿತಿ ಸಿಗಲಿದೆ. ವ್ಯಕ್ತಿಗಳು ಇಪಿಎಫ್ ಅನ್ನು ಭಾಗಶಃ ಅಥವಾ ಸಂಪೂರ್ಣವಾಗಿ ವಿತ್ ಡ್ರಾ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.

ಇಪಿಎಫ್‌ಒ ಪೋರ್ಟಲ್‌ನಲ್ಲಿ ಪಿಎಫ್ ಕುರಿತ ದೂರು ನೀಡುವುದು ಹೇಗೆ??
# ಉದ್ಯೋಗಿ ನಿವೃತ್ತಿ ಹೊಂದಲು ಒಂದು ವರ್ಷ ಬಾಕಿ ಇರುವಾಗಲೇ ತಮ್ಮ ಪಿಎಫ್ ಫಂಡ್‌ನ ಶೇಕಡ 90 ಅನ್ನು ಹಿಂಪಡೆಯಲು ಅವಕಾಶವಿದೆ.

# ನಿರುದ್ಯೋಗದ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ಕೆಲಸ ತೊರೆದ ಒಂದು ತಿಂಗಳ ನಂತರ 75%ದಷ್ಟು ಹಾಗೂ ಎರಡು ತಿಂಗಳ ನಿರುದ್ಯೋಗದ ನಂತರ ಸಂಪೂರ್ಣ ಪಿಎಫ್ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ.
# ನೌಕರ ನಿವೃತ್ತಿ ವಯಸ್ಸನ್ನು ತಲುಪಿದ ಬಳಿಕ ಸಂಪೂರ್ಣ PF ಮೊತ್ತವನ್ನು ಹಿಂತೆಗೆದುಕೊಳ್ಳಬಹುದಾಗಿದೆ. ವಯಸ್ಸನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆಯೂ ನಿವೃತ್ತಿ ವಯಸನ್ನು 55 ವರ್ಷ ವರ್ಷಗಳಿಗೆ ನಿಗದಿಪಡಿಸಿದೆ.

 

ಇದನ್ನು ಓದಿ: Madhu bangarappa: ಶಿಕ್ಷಕರ ನೇಮಕಾತಿ ಬಗ್ಗೆ ಬಂತು ನೋಡಿ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ಶಿಕ್ಷಕರಾಗೋ ಕನಸು ಹೊತ್ತವರಿಗೆ ಖುಷಿಯೋ ಖುಷಿ

You may also like

Leave a Comment