B Y Vijayendra : ಕಳೆದ ಲೋಕಸಭಾ ಚುನಾವಣೆಯ ಬಳಿಕ ಚಡ್ಡಿದೋಸ್ತ್ ನಂತಿದ್ದ ಬಿ ಎಸ್ ಯಡಿಯೂರಪ್ಪ ಅವರನ್ನು ದ್ವೇಷಿಸುತ್ತಲೇ ಬರುತ್ತಿದ್ದ ಕೆ ಎಸ್ ಈಶ್ವರಪ್ಪ ಅವರು ಇದೀಗ ಯಾಕೋ ಯಡಿಯೂರಪ್ಪನವರ ಮೇಲೆ ಮೃದು ಧೋರಣೆ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿಗೆ ಘರ್ ವಾಪ್ಸಿ ಆಗುವ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಈ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿದ್ದಾರೆ.
ಹೌದು, ಈಶ್ವರಪ್ಪ ಬಿಜೆಪಿ ಮರು ಸೇರ್ಪಡೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಮಟ್ಟದಲ್ಲಾಗಲೀ, ರಾಷ್ಟ್ರ ಮಟ್ಟದಲ್ಲಾಗಲೀ ಈಶ್ವರಪ್ಪ ಅವರನ್ನು ಪಕ್ಷಕ್ಕೆ ವಾಪಸ್ ಕರೆತರುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಈ ಬಗ್ಗೆ ಈಶ್ವರಪ್ಪ ಒಲವು ತೋರಿಸಿದರೆ ಪಕ್ಷದ ವರಿಷ್ಠರು , ಹೈಕಮ್ಯಾಂಡ್ ನಿರ್ಣಯ ಕೈಗೊಳ್ಳಲಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಅಲ್ಲದೆ ಯಾರ್ಯಾರು ತಪ್ಪನ್ನು ಅರ್ಥ ಮಾಡಿಕೊಂಡು ವಾಪಸ್ ಬರಬೇಕು ಎಂದುಕೊಂಡಿದ್ದರೋ ಅಂತಹವರು ಪಕ್ಷಕ್ಕೆ ಬರಬಹುದು. ದೆಹಲಿಯಲ್ಲಿ ವರಿಷ್ಠರು ಕೂತು ಇದರ ಬಗ್ಗೆ ಚರ್ಚೆ ಮಾಡುತ್ತಾರೆ. ಇಲ್ಲಿಯವರೆಗೂ ಈ ವಿಚಾರ ಚರ್ಚೆಗೆ ಬಂದಿಲ್ಲ. ತಾವು ಮಾಡಿರುವ ತಪ್ಪನ್ನು ಅರ್ಥಮಾಡಿಕೊಂಡರೆ ಸಾಕು ಎಂದು ಹೇಳಿದರು.
ಇದನ್ನೂ ಓದಿ:Kodagu: ಜೂ.23 ರಂದು ಅರಣ್ಯ ಸಚಿವರಿಂದ ಕೊಡಗು ಜಿಲ್ಲಾ ಪ್ರವಾಸ!
