ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾದ ಆರೋಪದ ಪ್ರಕರಣ ಮಾಸುವ ಮುನ್ನವೇ ತುಪ್ಪದ ಪ್ರಸಾದ ಮಾರಾಟದಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಎದುರಾಗಿದೆ.
ತುಪ್ಪ ಪ್ರಸಾದ ಮಾರಾಟದಲ್ಲಿ 16 ಲಕ್ಷ ರೂ. ಅಕ್ರಮ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗು ತ್ತಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ. ಈ ನಡುವೆ,”ತುಪ್ಪ ಮಾರಾಟಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಬಗ್ಗೆ ಗಮನಕ್ಕೆ ಬಂದಿಲ್ಲ” ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಹೇಳಿದ್ದಾರೆ.
ದೇವಸ್ಥಾನದಲ್ಲಿ ಕೌಂಟರ್‌ಗಳ ಮೂಲಕ ಭಕ್ತರಿಗೆ ತುಪ್ಪದ ಪ್ರಸಾದ ಮಾರಾಟ ಮಾಡಲಾಗುತ್ತಿದೆ. ಪ್ರಸಾದ ಮಾರಾಟದಿಂದ ಬಂದಿರುವ ಹಣ ಮತ್ತು ಮಾರಾಟವಾದ ಒಟ್ಟು ಪ್ಯಾಕೆಟ್‌ಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಹೀಗೆ ಮಾರಾಟ ಮಾಡುವಾಗ 16 ಲಕ್ಷ ರೂ. ಬೆಲೆ ಬಾಳುವ 16,000 ತುಪ್ಪದ ಪ್ಯಾಕೆಟ್‌ಗಳು ಕಡಿಮೆಯಾಗಿವೆ. ಈ ವ್ಯತ್ಯಾಸದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ಸಿಪಿಐ (ಎಂ) ನಾಯಕರನ್ನು ಈಗಾಗಲೇ ಬಂಧಿಸಲಾಗಿರುವುದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರಕ್ಕೆ ಮುಜುಗರ ಉಂಟುಮಾಡಿದೆ
