2
Actress Ranya Rao: ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್ ಮಾಡಿದ್ರು, ನಾನು ಅವರ ಟ್ರ್ಯಾಪ್‌ಗೆ ಬಿದ್ದು ಈ ಕೆಲಸ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಆರೋಪಿ ನಟಿ ರನ್ಯಾ ರಾವ್ ಹೇಳಿಕೊಂಡಿದ್ದಾರೆ. ಒಂದಷ್ಟು ಜನ ಸೇರಿ ನನ್ನನ್ನು ಈ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ನನ್ನನ್ನು ಟ್ರ್ಯಾಪ್ ಮಾಡಿದ್ದು, ಹಾಗಾಗಿ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ ರನ್ಯಾ.
ನಟಿ ಯಾವ ಟ್ರ್ಯಾಪ್‌ಗೆ ಒಳಗಾದರು?ಟ್ರ್ಯಾಪ್ ಮಾಡಿದ್ದ ಯಾರು? ಏಕೆ ಎನ್ನುವ ಪ್ರಶ್ನೆಗಳನ್ನು ಡಿಆರ್‌ಐ ಅಧಿಕಾರಿಗಳು ಕೇಳಿದ್ದಾರೆ. ಆದರೆ ನಟಿ ಉತ್ತರ ನೀಡಲಿಲ್ಲ.
ಚಿನ್ನದ ಗಟ್ಟಿಯನ್ನು ತೊಡೆಯಲ್ಲಿ ಅಂಟಿಸಿಕೊಂಡು ನಟಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ದುಬೈನಿಂದ ಹೊರಟಿದ್ದ ನಟಿಯನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ.
