Home » Kodagu: ಮಡಿಕೇರಿಯಲ್ಲಿ ಮಾ.24 ರಂದು ಮಾಜಿ ಸೈನಿಕರ ರ್ಯಾಲಿ!

Kodagu: ಮಡಿಕೇರಿಯಲ್ಲಿ ಮಾ.24 ರಂದು ಮಾಜಿ ಸೈನಿಕರ ರ್ಯಾಲಿ!

by ಕಾವ್ಯ ವಾಣಿ
0 comments

Kodagu: ಮಡಿಕೇರಿಯಲ್ಲಿ( Kodagu) ಮಾಜಿ ಸೈನಿಕರ ಸಂಪರ್ಕ, ರ್ಯಾಲಿ ಸೇವಾ ನಿರತ ಸಶಸ್ತ್ರ ಪಡೆಗಳ ಯೋಧರು, ನಿವೃತ್ತ ಸೈನಿಕರು ಜೊತೆ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ, ಅವರ ಜೊತೆ ಸಂವಹನ ನಡೆಸಲು ಮತ್ತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಕೆಯೊಂದನ್ನು ಕಲ್ಪಿಸಲಾಗಿದೆ.

ವಿಶೇಷವಾಗಿ ಕೊಡಗಿನ ಸಶಸ್ತ್ರ ಪಡೆಗಳ ಕುಟುಂಬವು ಇದರ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ, ಪಿಂಚಣಿ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಸ್ಥಳದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಹಾಗೂ ವಿವಿಧ ರೀತಿಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿಕೊಳ್ಳಲು ಇದು ಸಹಕಾರಿಯಾಗಿದೆ.

ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ ಔಟ್‍ರೀಚ್/ ರ್ಯಾಲಿಯನ್ನು ಆಯೋಜಿಸಲಾಗಿದ್ದು, ಮಾಜಿ ಸೈನಿಕರ ರ್ಯಾಲಿಯು ಮಾರ್ಚ್, 24 ರಂದು ಬೆಳಗ್ಗೆ 9 ಗಂಟೆಗೆ ಕ್ಯಾಪಿಟಲ್ ಹಾಲ್, ಹಿಲ್‍ಡೇಲ್ ರೆಸಾರ್ಟ್, ಐಒಸಿ ಪೆಟ್ರೋಲ್ ಪಂಪ್ ಎದುರು, ಸ್ಟುವರ್ಟ್ ಹಿಲ್, ಮಡಿಕೇರಿ ಇಲ್ಲಿ ನಡೆಯಲಿದೆ.
ಇದರ ಜೊತೆಗೆ, ಮಾಜಿ ಸೈನಿಕರ ಅನುಕೂಲಕ್ಕಾಗಿ ರೆಕಾರ್ಡ್ ಕಚೇರಿಗಳು, ಸ್ಪರ್ಶ್, ನೇಮಕಾತಿ, ಎಡಬ್ಲ್ಯೂಪಿಒ. ವೈದ್ಯಕೀಯ ಶಿಬಿರ ಇತ್ಯಾದಿಗಳ ಕಿಯೋಸ್ಕ್‍ಗಳು / ಮಳಿಗೆಗಳನ್ನು ಸಹ ಸ್ಥಳದಲ್ಲಿ ಇರಿಸಲಾಗುವುದು.

You may also like