Home » Excise Department: ಮದ್ಯದಂಗಡಿ ಮಾಲೀಕರಿಗೆ ಗುಡ್‌ನ್ಯೂಸ್‌

Excise Department: ಮದ್ಯದಂಗಡಿ ಮಾಲೀಕರಿಗೆ ಗುಡ್‌ನ್ಯೂಸ್‌

0 comments
Liquor Price

Excise Department: ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು ಇಳಿಸಿದೆ. ಈ ಮೂಲಕ ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಸರಕಾರ ಮಣಿದಿದೆ. ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು ಸರಕಾರ ಭಾರೀ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಇದರಿಂದ ಮದ್ಯದಂಗಡಿ ಮಾಲೀಕರು ಕಂಗಾಲಾಗಿದ್ದರು.

ಅಬಕಾರಿ ಲೈಸೆನ್ಸ್‌ ನವೀಕರಣ ಶುಲ್ಕವನ್ನು ಶೇ.50 ರಷ್ಟು ಇಳಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಜುಲೈನಿಂದ ರಾಜ್ಯದಲ್ಲಿ ಅಬಕಾರಿ ವರ್ಷ ಪ್ರಾರಂಭವಾಗಲಿದ್ದು, ಅಬಕಾರಿ ಸನ್ನದುದಾರರು ತಮ್ಮ ಲೈಸೆನ್ಸ್‌ಗಳ ನವೀಕರಣ ಮಾಡುತ್ತಾರೆ.

ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರಕಾರ ಸನ್ನದುದಾರರ ಲೈಸೆನ್ಸ್‌ ನವೀಕರಣ ಶುಲ್ಕನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಪರಿಷ್ಕೃತ ದರ ಜುಲೈ 1 ರಿಂದ ಜಾರಿಗೆ ಬರಲಿದೆ.

ಸರಕಾರ ಈ ಮೊದಲು ಲೈಸೆನ್ಸ್‌ ನವೀಕರಣ ಶುಲ್ಕವನ್ನು ಶೇ100 ರಷ್ಟು ಹೆಚ್ಚಳ ಮಾಡಿತ್ತು. ಮದ್ಯದಂಗಡಿಗಳ ಲೈಸೆನ್ಸ್‌ ಶುಲ್ಕ ಈ ಮೂಲಕ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.

You may also like