Home » Bengaluru : ಲಾಡ್ಜ್ ನಲ್ಲಿ ಪುತ್ತೂರು ಯುವಕ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಪೋಸ್ಟ್ ಮಾರ್ಟಂ ವರದಿಯಲ್ಲಿ ಅಘಾತಕಾರಿ ವಿಚಾರ ಬಹಿರಂಗ !!

Bengaluru : ಲಾಡ್ಜ್ ನಲ್ಲಿ ಪುತ್ತೂರು ಯುವಕ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಪೋಸ್ಟ್ ಮಾರ್ಟಂ ವರದಿಯಲ್ಲಿ ಅಘಾತಕಾರಿ ವಿಚಾರ ಬಹಿರಂಗ !!

0 comments

Bengaluru : ಬೆಂಗಳೂರಿನ ಲಾಡ್ಜ್ ನಲ್ಲಿ ತನ್ನ ಪ್ರೇಯಸಿಯೊಂದಿಗೆ ಸುಮಾರು ಎಂಟು ದಿನಗಳಿಂದಲೂ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕ ತಕ್ಷಿತ್ ಅನುಮಾನಸ್ಪದವಾಗಿ ಸಾವಿಗೀಡಾದ ಘಟನೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ರಕ್ಷಿತ್ ಸಾವಿನ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದ್ದು ಸ್ಪೋಟಕ ಅಂಶ ಬಯಲಾಗಿದೆ.

 

ಹೌದು, ಲಾಡ್ಜ್ ನಲ್ಲಿ ಪುತ್ತೂರು ಮೂಲದ ಯುವಕ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದ್ದು, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಯುವಕನ ಕಿಡ್ನಿ ಫೇಲ್ಯೂರ್ ಆಗಿತ್ತು ಎಂಬುದು ದೃಢಪಟ್ಟಿದೆ.

 

ಕೆಲ ದಿನಗಳ ಹಿಂದೆ ಪುತ್ತೂರು ಮೂಲದ ಯುವಕ ಹಾಗೂ ಓರ್ವ ಯುವತಿ ಮಡಿವಾಳ ಬಳಿಯ ಲಾಡ್ಜ್ ನಲ್ಲಿ ತಂಗಿದ್ದರು. 8 ದಿನಗಳ ಕಾಲ ಮಡಿವಾಳ ಬಳಿ ಲಾಡ್ಜ್ ನಲ್ಲಿ ವಾಸವಾಗಿದ್ದರು. ಈ ವೇಳೆ ಯುವಕ ಏಕಾಏಕಿ ಸಾವನ್ನಪ್ಪಿದ್ದ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಯುವಕ ಪುತ್ತೂರು ಮೂಲದ ತಕ್ಷಿತ್ ಎಂದು ತಿಳಿದುಬಂದಿತ್ತು. ಯುವಕನ ಸಾವಿಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತನ ಕಿಡ್ನಿ ವೈಫಲ್ಯವಾಗಿತ್ತು. ಅಲ್ಲದೇ ಯುವಕ ಲಿವರ್ ಸಮಸ್ಯೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಆರೋಗ್ಯ ಸಮಸ್ಯೆಯಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

 

ಇನ್ನೂ ದಿಢೀರ್ ಕಿಡ್ನಿ ವೈಫಲ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪೊಲೀಸರು ಎರಡು ದಿನಗಳಿಂದ ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಫುಡ್ ಪಾಯಿಸನ್ ಅಗಿರುವ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಆನ್‌ಲೈನ್‌ನಿಂದ ಯಾವ ಫುಡ್ ಎಲ್ಲಿಂದ ಆರ್ಡರ್ ಮಾಡಿದ್ದರು? ನಂತರ ಇಬ್ಬರು ಸೇವಿಸಿದ ಮಾತ್ರೆಗಳೇನು ಎಂಬುದರ ಬಗ್ಗೆ ತಿಳಿದು ಬಂದಿಲ್ಲ

You may also like