Dark Chocolate: ಚಾಕೊಲೇಟ್ ಅಂದ್ರೆ ಪ್ರತೀ ಮಕ್ಕಳಿಗೂ ಪಂಚ ಪ್ರಾಣ ಆಗಿರುತ್ತೆ. ಹಾಗಂತ ಮಕ್ಕಳಿಗೆ ಪೋಷಕರು ಸಿಕ್ಕ ಸಿಕ್ಕ ಚಾಕೊಲೇಟ್ ತಿನ್ನಬಾರದು ಅಂತ ರಿಸ್ಟ್ರಿಕ್ ಮಾಡೋದೇ ಹೆಚ್ಚು. ಅದರಲ್ಲೂ ಕೆಲವು ಪೋಷಕರು ಮಕ್ಕಳಿಗೆ ಹೆಚ್ಚು ಚಾಕೊಲೇಟ್ ಕೊಡಲು ಭಯಪಡುತ್ತಾರೆ. ಆದ್ರೆ ತಜ್ಞರ ಮಾಹಿತಿ ಪ್ರಕಾರ ಡಾರ್ಕ್ ಚಾಕೊಲೇಟ್ (Dark Chocolate) ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿದ್ದು, ಡಾರ್ಕ್ ಚಾಕೊಲೇಟ್ ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಅದರಲ್ಲಿಯೂ ಮಕ್ಕಳಿಗೆ ಈ ವಿಧದ ಚಾಕೊಲೇಟ್ ಕೊಡಬಹುದು ಎಂದು ತಜ್ಞರು ಹೇಳುತ್ತಾರೆ. ಹೌದು, ವಾಸ್ತವವದಲ್ಲಿ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಮಕ್ಕಳಿಗೆ ಹೇಗೆ ಒಳ್ಳೆಯದು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಸಲಾಗಿದೆ.
ಮಕ್ಕಳಿಗೆ ಡಾರ್ಕ್ ಚಾಕೊಲೇಟ್ ಹೆಚ್ಚು ಒಳ್ಳೆಯದು ಯಾಕೆಂದರೆ ಇದು ನೈಸರ್ಗಿಕವಾಗಿರುತ್ತವೆ ಹಾಗೂ ಇದರಲ್ಲಿ ಯಾವುದೇ ರೀತಿಯ ಸಕ್ಕರೆ ಅಂಶವಿರುವುದಿಲ್ಲ. ಮುಖ್ಯವಾಗಿ ಡಾರ್ಕ್ ಚಾಕೊಲೇಟ್ ಮಕ್ಕಳ ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳ ಕಲಿಕಾ ಪ್ರಕ್ರಿಯೆಗೆ ಇದು ಸಹಕಾರಿಯಾಗುತ್ತದೆ.
ಉತ್ತಮವಾದ ಡಾರ್ಕ್ ಚಾಕಲೊಲೇಟ್ ಅನ್ನು ಮಕ್ಕಳಿಗೆ ನೀಡುವುದು ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಅವರ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ಡೋಪಮೈನ್, ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಾದ ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮಕ್ಕಳ ಒತ್ತಡವೂ ನಿವಾರಣೆಯಾಗುತ್ತದೆ.
ಇನ್ನು ಡಾರ್ಕ್ ಚಾಕೊಲೇಟ್ ನಲ್ಲಿ ಪೋಷಕಾಂಶ ಮತ್ತು ಖನಿಜಾಂಶಗಳು ಹೇರಳವಾಗಿರುತ್ತದೆ. ಅಲ್ಲದೆ ಇದು ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲ್ಲದೆ ಇದರಲ್ಲಿರುವ ಕಬ್ಬಿಣ, ಸತು, ಪೊಟ್ಯಾಸಿಯಮ್‌ಗಳು ದೇಹದ ಚಯಾಪಚಯ ಪ್ರಕ್ರಿಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮುಖ್ಯವಾಗಿ ಡಾರ್ಕ್ ಚಾಕೊಲೇಟ್ ಅನ್ನು ಒಂದು ರೀತಿಯ ಎನರ್ಜಿ ಬೂಸ್ಟರ್ ಎಂದು ಕರೆಯಲಾಗುತ್ತದೆ. ಇದನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಶಕ್ತಿ ಹೆಚ್ಚುತ್ತದೆ ಜೊತೆಗೆ ದಿನಪೂರ್ತಿ ಮಕ್ಕಳು ಆಕ್ಟಿವ್ ಆಗಿ ಇರಲು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಡಾರ್ಕ್ ಹಾಗಾಗಿ ಚಾಕೊಲೇಟ್ ಇದನ್ನು ಯಾರು ಬೇಕಾದರೂ ಸೇವನೆ ಮಾಡಬಹುದು. ಆದ್ರೆ ನೆನಪಿರಲಿ ಅತಿಯಾದರೆ ಅಮೃತವು ವಿಷವಾಗುತ್ತೆ ಅನ್ನೋದು.
