Home » CD Case: ‘ರಾಜ್ಯದ ಮಾಜಿ ಸಿಎಂ ಒಬ್ಬರ ಸಿಡಿಯನ್ನು ಸದ್ಯದಲ್ಲೇ ರಿಲೀಸ್ ಮಾಡುವೆ’ – ಮಾಜಿ ಶಾಸಕರೊಬ್ಬರ ಸ್ಪೋಟಕ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಸಂಚಲನ !!

CD Case: ‘ರಾಜ್ಯದ ಮಾಜಿ ಸಿಎಂ ಒಬ್ಬರ ಸಿಡಿಯನ್ನು ಸದ್ಯದಲ್ಲೇ ರಿಲೀಸ್ ಮಾಡುವೆ’ – ಮಾಜಿ ಶಾಸಕರೊಬ್ಬರ ಸ್ಪೋಟಕ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಸಂಚಲನ !!

5 comments
CD Case

CD Case: ಕರ್ನಾಟಕ ರಾಜ್ಯದ(Karnataka Politics) ರಾಜಕೀಯವಂತೂ ಇದೀಗ ತೀರ ಹೊಲಸೆಬ್ಬಿ ಹೋಗಿದೆ. ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ವೈಯಕ್ತಿಕ ವಿಚಾರಗಳನ್ನು ತಂದು ಇಡೀ ರಾಜಕೀಯ ವ್ಯವಸ್ಥೆಯನ್ನು ಕುಲಗೆಡಿಸಿಬಿಟ್ಟಿದ್ದಾರೆ. ಅದರಲ್ಲೂ ಈ ಮೂಡ ಹಗರಣ ಬೆಳಕಿಗೆ ಬಂದ ಬಳಿಕ ಬೇರೆ ಬೇರೆ ಪಕ್ಷದ ರಾಜಕೀಯ ನಾಯಕರು ಕೆಸರೆರಚಾಟದಲ್ಲಿ ತೊಡಗಿಕೊಂಡಿದ್ದು ಹಲವಾರು ವೈಯಕ್ತಿಕ ವಿಚಾರಗಳನ್ನು ತಂದು ಬೀದಿರಂಪಾಟವನ್ನು ಮಾಡಿಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲಿ ರಾಜ್ಯದ ಮಾನ ಹರಾಜಾಕುತ್ತಿದ್ದಾರೆ.

ಅದರಲ್ಲೂ ಈ ಸಿಡಿ(CD) ವಿಚಾರಗಳು ಕರ್ನಾಟಕದ ರಾಜಕೀಯದ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಬುಡಮೇಲು ಮಾಡುತ್ತಿವೆ. ರಾಜ್ಯ ರಾಜಕೀಯದಲ್ಲಿ ಸಿಡಿ ವಿಚಾರ ಬಹಿರಂಗ ಮಾಡುವುದು ಇಂದು, ನಿನ್ನೆಯ ವಿಚಾರವಲ್ಲ. ಅದಕ್ಕೆ ಒಂದು ಇತಿಹಾಸವನ್ನೇ ಸೃಷ್ಟಿಸಿಬಿಟ್ಟಿದ್ದಾರೆ ನಮ್ಮ ರಾಜಕೀಯ ಮಹಾನುಭಾವರುಗಳು. ಏನೇ ಚರ್ಚೆಗಳು ಮುನ್ನಲೆಗೆ ಬರಲಿ ಸಿಡಿ ಬಿಡುತ್ತೇನೆ, ಸಿಡಿ ರಿಲೀಸ್ ಮಾಡುತ್ತೇನೆ, ಪೆನ್ ಡ್ರೈವ್ ಹಂಚುತ್ತೇನೆ ಎಂದು ಬಹಿರಂಗವಾಗೇ ಮುಲಾಜಿಲ್ಲದೆ ಮಾನಹರಾಜಿಗೆ ನಿಲ್ಲುತ್ತಿದ್ದಾರೆ. ಇದು ಎಂತಹ ದುರಂತ ಎಂಬುದನ್ನು ಯಾರೂ ಮನಗಾಣುತ್ತಿಲ್ಲ. ಮಾಧ್ಯಮಗಳೂ ಇದಕ್ಕೆ ಕುಮ್ಮಕ್ಕು ನೀಡುವುದು ವಿಷಾದವೇ ಸರಿ. ಅಂತೆಯೇ ಇದೀಗ ಮಾಜಿ ಶಾಸಕರೊಬ್ಬರು ರಾಜ್ಯದ ಮಾಜಿ ಸಿಎಂ ಒಬ್ಬರ ಸಿಡಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆಂದು ತಾಕೀತು ಮಾಡಿ ರಾಜ್ಯದ ಮತ್ತೊಂದಿಷ್ಟು ಮರ್ಯಾದೆಯನ್ನು ಕಳೆಯಲು ಕಾತುರರಾಗಿದ್ದಾರೆ.

ಹೌದು, ಕಾಂಗ್ರೆಸ್​​​ನ ಮಾಜಿ ಶಾಸಕ ಆನಂದ ನ್ಯಾಮಗೌಡ(Ananda Nyamagouda) ಅವರು ಸದ್ಯದಲ್ಲೇ ರಾಜ್ಯದ ಮಾಜಿ ಸಿಎಂ(Ex C ಓರ್ವರಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಶೀಘ್ರವೇ ರಿಲೀಸ್ ಆಗಲಿದೆ ಎಂದು ಹೇಳಿಕೆಯನ್ನು ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯದ ಅದರಲ್ಲೂ ಬಿಜೆಪಿ(BJP)ಯ ಮಾಜಿ ಸಿಎಂ ಓರ್ವರ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದ್ದಾರೆ.

ಅಲ್ಲದೇ ಆ CDಯು ಭಾರತೀಯ ಜನತಾ ಪಕ್ಷದ ನಾಯಕನದ್ದೇ ಎಂದು ಅವರು ಒತ್ತಿ-ಒತ್ತಿ ಹೇಳಿದ್ದು ಭಾರೀ ಕುತೂಹಲ ಕೆರಳಿಸಿದೆ. ಅದು ಯಾರಿಗೆ ಸಂಬಂಧಿಸಿದ ಸಿಡಿ ಎಂಬುವುದು ನ್ಯಾಮಗೌಡ ಅವರು ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ಕಾಂಗ್ರೆಸ್ ನವರು ಮಾಡಿದ್ದಾರೆ ಎನ್ನಲಾದ ಹಗರಣಗಳ ವಿರುದ್ಧ ಬಿಜೆಪಿ ನಾಯಕರು ಭಾರೀ ಹೋರಾಟ ನಡೆಸುತ್ತಿದ್ದು, ಇದರ ನಡುವೆ ಮಾಜಿ ಶಾಸಕರು ಬಿಜೆಪಿಗೆ ತಿರುಮಂತ್ರ ಹಾಕುವ ಹೇಳಿಕೆ ನೀಡಿರುವುದು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಒಂದು ವೇಳೆ ನ್ಯಾಮಗೌಡ ಅವರು ಹೇಳುವ ಮಾತು ನಿಜವಾದರೆ, ಆಗ ಕಾಂಗ್ರೆಸ್​​​ನವರು ಬಿಜೆಪಿ ಮೇಲೆ ಯಾವ ರೀತಿ ಮುಗಿ ಬೀಳಲಿದ್ದಾರೆ ಎಂಬುವುದೇ ದೊಡ್ಡ ಕೂತೂಹಲಕ್ಕೆ ಕಾರಣವಾಗಿದೆ.

You may also like

Leave a Comment