1
New delhi: ನಕಲಿ ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ನಾಗರಿಕ ಸೇವಾ ಪರೀಕ್ಷೆಯ ಲಾಭ ಪಡೆದುಕೊಂಡಂತಹ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.
ಜಾಮೀನು ಮಂಜೂರು ಮಾಡಿದಂತಹ ನ್ಯಾಯಪೀಠ ತನಿಖೆಗೆ ಸಹಕರಿಸುವಂತೆ ಖೇಡ್ಕರ್ ಅವರಿಗೆ ಸೂಚಿಸಿದ್ದು, ಆಕೆ ಯಾವುದೇ ಕೊಲೆ ಸುಲಿಗೆಯಂತಹ, ಭಯೋತ್ಪಾದನೆಯಂತಹ ತಪ್ಪನ್ನು ಮಾಡಿಲ್ಲ, ಜೊತೆಗೆ ಈಗ ಆಕೆಗೆ ಬೇರೆ ಕೆಲಸವೂ ಸಿಗುತ್ತಿಲ್ಲ ಎಂದು ಜಾಮೀನಿಗೆ ಕಾರಣ ಕೊಟ್ಟಿರುವ ಕೋರ್ಟ್ ನ ಪೀಠದ ಮೇಲೆ ಇದೀಗ ಯುಪಿಎಸ್ಸಿ ಹಾಗೂ ದೆಹಲಿ ಪೊಲೀಸರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
2023 ರಲ್ಲಿ ಆಕೆ ಅಂಗವಿಕಲರ ಕೋಟಾ ಹಾಗೂ ಓಬಿಸಿ ಕೋಟಾದ ದುರುಪಯೋಗ ಪಡೆದುಕೊಂಡು ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದು, ಜುಲೈ 31 ರಂದು ಆಕೆಯ ಪೋಸ್ಟ್ ಅನ್ನು ರದ್ದುಗೊಳಿಸಿ, ಮುಂದಿನ ಎಲ್ಲ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗಿತ್ತು. ಹಾಗೂ ಆಕೆಯ ಮೇಲೆ ದೆಹಲಿ ಪೊಲೀಸರು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದರು.
