ಕುಂದಾಪುರ: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನಕಲಿ ವೆಬ್‌ಸೈಟ್‌ನ್ನು ರೂಪಿಸಿ ವಂಚನೆ ಮಾಡುತ್ತಿದ್ದ ರಾಜಸ್ಥಾನದ ರಾಜ್ಯದ ತಿಜಾರಿ ಜಿಲ್ಲೆಯ ಆರೋಪಿ ನಾಸೀರ್ ಹುಸೇನ್ (21) ಎಂಬಾತನನ್ನು ಬಂಧನ ಮಾಡಲಾಗಿದೆ.
ನಕಲಿ ವೆಬ್‌ಸೈಟ್ ಮೂಲಕ ದೇವಸ್ಥಾನಕ್ಕೆ ಆಗಮಿಸುವ ದೂರದ ಊರಿನ ಭಕ್ತಾದಿಗಳಿಂದ ಆನ್‌ಲೈನ್‌ನಲ್ಲಿ ಮುಂಗಡವಾಗಿ ರೂಮ್‌ಬುಕ್ಕಿಂಗ್ ಮಾಡುವುದಾಗಿ ಹೇಳಿ ಹಣ ಪಡೆದು ನಕಲಿ ರಶೀದಿ ನೀಡಿ ವಂಚನೆ ಮಾಡುತ್ತಿದ್ದ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದರು.
ತನಿಖೆ ಮೂಲಕ ನಾಸಿರ್ ಹುಸೇನ್ ಆರೋಪಿ ಎಂದು ಪತ್ತೆಯಾಗಿದ್ದು, ಶುಕ್ರವಾರ ಆತನನ್ನು ರಾಜಸ್ಥಾನದ ದಾಖಾಪುರಿ ಎಂಬಲ್ಲಿ ಬಂಧನ ಮಾಡಿದ್ದು, ಆತನಿಂದ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
