Home » Bengaluru: ವಿರಾಟ್ ಲಂಡನ್ ಗೆ ಪ್ರಯಾಣ ಎಂಬ ಸುಳ್ಳು ವದಂತಿ: ಅರೆಸ್ಟ್ ವಿರಾಟ್ ಕೊಹ್ಲಿ ಟ್ರೆಂಡ್

Bengaluru: ವಿರಾಟ್ ಲಂಡನ್ ಗೆ ಪ್ರಯಾಣ ಎಂಬ ಸುಳ್ಳು ವದಂತಿ: ಅರೆಸ್ಟ್ ವಿರಾಟ್ ಕೊಹ್ಲಿ ಟ್ರೆಂಡ್

0 comments

Bengaluru: ಎರಡು ದಿನಗಳಿಂದ ಸದ್ದು ಮಾಡುತ್ತಿರುವ ಬೆಂಗಳೂರು ಕಾಲ್ತುಳಿತ ಪ್ರಕರಣ ಕ್ಷಣ ಕ್ಷಣಕ್ಕೂ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ವಿರಾಟ್ ದಂಪತಿ ಲಂಡನ್ ಗೆ ಪ್ರವಾಸಕ್ಕಾಗಿ ಹೋಗಿದ್ದಾರೆ ಎಂಬ ವದಂತಿ ಹರಡಿದೆ.

X ನಲ್ಲಿ ಒಬ್ಬ ವ್ಯಕ್ತಿ ವಿರಾಟ್ ಕೊಹ್ಲಿ ದಂಪತಿ ಇಷ್ಟೊಂದು ಸಾವಿನ ಮಧ್ಯೆಯೂ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಪೋಸ್ಟ್ ಮಾಡಿದ್ದು, ಇದೀಗ ಪರ ವಿರೋಧ ಚರ್ಚೆಗಳು ಆಗುತ್ತಿವೆ. ಒಂದೆಡೆ ಕೊಹ್ಲಿಯನ್ನು ಅರೆಸ್ಟ್ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದು, ಇನ್ನೊಂದೆಡೆ ಕಾಲ್ತುಳಿತಕ್ಕೂ ಕೊಹ್ಲಿ ಗು ಯಾವ ಸಂಬಂಧವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸರ್ಕಾರ ಈ ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರ್‌ಸಿಬಿ ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆ ಅವರನ್ನು ಬಂಧಿಸಿದೆ. ಅಷ್ಟಕ್ಕೂ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೆ ಎಸ್ ಸಿ ಎ ಆಯೋಜನೆ ಮಾಡಿದ್ದು, ಆಟಗಾರರದ್ದು ಯಾವುದೇ ಪಾತ್ರವಿರಲಿಲ್ಲ. ಇದಾಗ್ಯೂ ಕೂಡ ಕೊಹ್ಲಿ ಮೃತರಿಗೆ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದರು.

You may also like