3
Chikkamagaluru: ಪಕ್ಕದ ಊರಿನ ಮದುವೆ ಕಾರ್ಯಕ್ರಮಕ್ಕೆ ಪಾತ್ರೆ ಕೊಟ್ಟಿದ್ದಕ್ಕೆ ಮುಳ್ಳುವಾರೆ ಗ್ರಾಮದಲ್ಲಿ ಎಂ.ಎಂ.ಭೈರಪ್ಪ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.
ವಸ್ತಾರೆ ಹೋಬಳಿ ಮುಳ್ಳುವಾರೆ ಗ್ರಾಮದಲ್ಲಿ ಊರಿನ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಊರಿನ ಪಾತ್ರೆಗಳನ್ನು ನಿರ್ವಹಿಸುವ ಹೊಣೆ ನನ್ನದಾಗಿತ್ತು. ಪಕ್ಕದ ಗ್ರಾಮ ಕೆಸರಿಕೆಯಲ್ಲಿ ಒಂದೇ ದಿನ ಮೂರು ಮದುವೆ ಕಾರ್ಯವಿತ್ತು. ಅಡುಗೆ ಮಾಡಲು ಪಾತ್ರೆಯ ಕೊರತೆ ಉಂಟಾಗಿದ್ದರಿಂದ 3 ಪಾತ್ರೆಗಳನ್ನು ನೀಡಿದ್ದೆ. ಇದೇ ಕಾರಣವಾಗಿಸಿ, ಆರು ಮಂದಿ ಆರು ಸಾವಿರ ದಂಡ ವಿಧಿಸಿದ್ದು, ಜೊತೆಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
