Home » Mangalore: ಭಾರೀ ಮಳೆ, ಗುಡ್ಡ ಕುಸಿತದ ಶಬ್ದ ಕೇಳಿ ಮನೆಯಿಂದ ಓಡಿ ಹೋಗಿ ಪಾರಾದ ಕುಟುಂಬದ ಸದಸ್ಯರು

Mangalore: ಭಾರೀ ಮಳೆ, ಗುಡ್ಡ ಕುಸಿತದ ಶಬ್ದ ಕೇಳಿ ಮನೆಯಿಂದ ಓಡಿ ಹೋಗಿ ಪಾರಾದ ಕುಟುಂಬದ ಸದಸ್ಯರು

by Mallika
0 comments
School Holiday

Mangalore: ಮುಂಗಾರು ಮಹಾಮಳೆಗೆ ಮಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಭೂಕುಸಿತ ಉಂಟಾಗಿ ಮನೆಗಳು ಹಾನಿಗೊಳಗಾಗಿದೆ. ಮಂಗಳೂರು ಸಮೀಪದ ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿದೆ. ಗುಡ್ಡದ ಕೆಳಭಾಗದಲ್ಲಿಯೇ ಮನೆ ಇದ್ದು, ಕುಟುಂಬದವರು ಗುಡ್ಡ ಕುಸಿಯುತ್ತಿರುವ ಶಬ್ದ ಕೇಳಿ ಮನೆಯಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಭಾರೀ ಮಳೆಯಿಂದ ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಉಂಟಾಗಿದೆ. ಗುಡ್ಡದ ಕೆಳಭಾಗದಲ್ಲಿಯೇ ಮನೆ ಇದ್ದಿದ್ದು, ಮನೆಯ ಹಿಂಬದಿಯ ಗೋಡೆಯನ್ನು ಸೀಳಿ ಮನೆಯೊಲಗೆ ಮಣ್ಣು, ನೀರು ನುಗ್ಗಿದೆ. ನೀರು ಬರುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಹೊರ ಓಡಿ ಹೋಗಿದ್ದಾರೆ.

You may also like