Home » Darshan: ಬಚಾವ್ ಮಾಡಲು ದರ್ಶನ್ ಗೆ ಹೊಸ ಷರತ್ತು ವಿಧಿಸಿದ ಕುಟುಂಬಸ್ಥರು, ಆಪ್ತರು ಹಾಗೂ ಪ್ರಭಾವಿಗಳು !! ಏನದು? ದರ್ಶನ್ ಒಪ್ಪಬಹುದೇ?

Darshan: ಬಚಾವ್ ಮಾಡಲು ದರ್ಶನ್ ಗೆ ಹೊಸ ಷರತ್ತು ವಿಧಿಸಿದ ಕುಟುಂಬಸ್ಥರು, ಆಪ್ತರು ಹಾಗೂ ಪ್ರಭಾವಿಗಳು !! ಏನದು? ದರ್ಶನ್ ಒಪ್ಪಬಹುದೇ?

5 comments

 

Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ(Renukaswamy murder Case) ಆರೋಪಿಯಾಗಿ ಜೈಲು ಸೇರಿರೋ ದರ್ಶನ್(Darshan) ಪಾಡಂತೂ ಹೇಳತೀರದಾಗಿದೆ. ಬಿಡುಗಡೆಯ ಭಾಗ್ಯವೇ ಸಿಗುತ್ತಿಲ್ಲ. ಹೀಗಾಗಿ ಆಪ್ತರು ಹಾಗೂ ಕುಟುಂಬಸ್ಥರಿಂದ ಇದೀಗ ಎರಡನೇ ಪ್ರಯತ್ನ ಶುರುವಾಗಿದೆ. ಆದರೆ ಈ ವೇಳೆ ಆ ಒಂದು ‘ಷರತ್ತಿನ’ ಬಗ್ಗೆ ಚರ್ಚೆಮಾಡಲಾಗಿದೆಯಂತೆ !!

 

ಹೌದು,  ದರ್ಶನ್ ಉಳಿಸಲು 2ನೇ ಸುತ್ತಿನ ಪ್ರಯತ್ನ ಶುರುವಾಗಿದೆ. ದರ್ಶನ್ ಬಚಾವ್‌ಗೆ ಪ್ರಭಾವಿಗಳು ಹೈವೋಲ್ಟೇಜ್ ಸಭೆಯನ್ನು(Highvoltage )ನಡೆಸಿದ್ದಾರೆ. ದರ್ಶನ್ ಉಳಿಸಲು ಇದೀಗ ಅವರ ಆಪ್ತರು, ರಾಜಕಾರಣಿಗಳು ಹಾಗೂ  ಕುಟುಂಬಸ್ಥರೇ ಅಖಾಡಕ್ಕಿಳಿದಿದ್ದಾರೆ. ಅಲ್ಲದೆ ತಾವು ನೀಡುವ ಆ ಒಂದು ಷರತ್ತನ್ನ ಒಪ್ಪಿದರೆ ಮಾತ್ರ ಬೆಂಬಲ ನೀಡುತೂತೇವೆ ಅಂದಿದ್ದಾರಂತೆ. ಹಾಗಿದ್ರೆ A2 ಆರೋಪಿ ದರ್ಶನ್‌ಗೆ ಕುಟುಂಬಸ್ಥರು(Family members), ಆಪ್ತರು ಹಾಕಿದ ಷರತ್ತು ಏನು? ಅದಕ್ಕೆ ದರ್ಶನ್ ಒಪ್ಪಬಹುದೇ?

 

ಏನದು ಷರತ್ತು?

ಪವಿತ್ರಾಳನ್ನ ಬಿಟ್ಟು ಬಂದ್ರೆ ಮಾತ್ರ ಬೆಂಬಲ ಎಂದಿದ್ದಾರೆ ಕುಟುಂಬಸ್ಥರು. ಹೌದು, ನೀವು ಹೇಳಿದಂತೆ ಕೇಳ್ತೀನಿ, ಹೇಗಾದರೂ ಮಾಡಿ ಬಚಾವ್ ಮಾಡಿ ಎಂದು ದರ್ಶನ್‌ ಹೇಳಿದ್ದಾರೆ. ಹೀಗಾಗಿ ಪವಿತ್ರಾ ಸಹವಾಸ ಬಿಟ್ಟರೆ ಕಾನೂನು ಹೋರಾಟ ಎಂಬ ಷರತ್ತು ವಿಧಿಸಿದ್ದಾರಂತೆ. ಪವಿತ್ರಾ ಗೌಡಳನ್ನ(Pavitra gowda) ಬಿಟ್ಟು ಬಂದ್ರೆ ಮಾತ್ರ ಬೆಂಬಲ ಎಂದು ಆಪ್ತರು ಹೇಳಿದ್ದಾರಂತೆ. ಪವಿತ್ರಾ ಸಹವಾಸ ಬಿಟ್ಟು ವಿಜಯಲಕ್ಷ್ಮಿ ಜತೆಯಲ್ಲಿರಬೇಕು. ಕುಟುಂಬಸ್ಥರು, ಆಪ್ತರ ಷರತ್ತಿಗೆ ದರ್ಶನ್ ಒಪ್ಪಿದ್ದಾರಂತೆ ಎಂದು ತಿಳಿದುಬಂದಿದೆ. ದರ್ಶನ್ ಒಪ್ಪಿಕೊಳ್ತಿದ್ದಂತೆ ಲಾಯರ್ ನೇಮಕಕ್ಕೆ ಪ್ಲ್ಯಾನ್‌ ಮಾಡಿದ್ದು, ಪವಿತ್ರಾಳನ್ನ ಬಿಟ್ಟರೆ ಮಾತ್ರ ಬೆಂಬಲ ಎಂದು ಆಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

You may also like

Leave a Comment