Viral Video : ಬದುಕನ್ನು ಸುಂದರವಾಗಿ, ಸಂತೋಷವಾಗಿಡಲು ಹಾಸ್ಯ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಮೊದಲಿಲ್ಲ ಚಿತ್ರಗಳಲ್ಲಿ, ನಾಟಕಗಳಲ್ಲಿ ನಾವು ಯಹಸ್ಯವನ್ನು ಕಾಣುತ್ತಿದ್ದೆವು. ಬಳಿಕ ಮಾತಿನ ಮೂಲಕವೇ ಹಾಸ್ಯ ಮಾಡಿ ಜನರನ್ನು ನಕ್ಕು ನಲಿಸುವ ಗಂಗಾವತಿ ಪ್ರಾಣೇಶ್, ಪ್ರೊ ಕೃಷ್ಣೇಗೌಡ ರಂತಹ ದೊಡ್ಡ ದೊಡ್ಡ ಕಲಾವಿದರು ಮುಂಚೂಣಿಗೆ ಬಂದರು. ನಂತರ ರಿಯಲ್ಸ್, ವಿಡಿಯೋ, ಯೂಟ್ಯೂಬ್ ಹೀಗೆ ಬೇರೆ ಬೇರೆ ಸೋಶಿಯಲ್ ಮೀಡಿಯಾಗಳಲ್ಲಿ ನಾವು ಹಾಸ್ಯವನ್ನು ಕಾಣಲು ಶುರು ಮಾಡಿದೆವು. ಆದರೆ ಕಾಲ ಬದಲಾದಂತೆ ಇತ್ತೀಚಿನ ದಿನಗಳಲ್ಲಿ ತಾಂಡಪ್ ಕಾಮಿಡಿ ತುಂಬಾ ಪ್ರಸಿದ್ಧಿ ಪಡೆಯುತ್ತಿದೆ. ಅನೇಕ ಸ್ಟ್ಯಾಂಡಪ್ ಕಾಮಿಡಿಯನ್ಸ್ ನಮ್ಮ ನಡುವೆ ಖ್ಯಾತಿಗಳಿಸಿದ್ದಾರೆ. ಅದರಲ್ಲಿ ಸ್ವಾತಿ ಸಚ್ ದೇವಾ ಕೂಡ ಒಬ್ಬರು. ಆದರೆ ಇದೀಗ ಈ ಸ್ವಾತಿ ವಿವಾದ ಒಂದನ್ನು ತನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.
ये बेशर्म स्वाति सचदेवा है कॉमेडी के नाम पर अश्लीलता फैलाने में लगी है । पैसे की सनक में अपने मम्मी पापा को भी नहीं बक्श रही । बेशर्म ।#Swatisachdevapic.twitter.com/RWh5KfcHp8
— Ramit.kumar (@Ramit_kumar_001) March 28, 2025
ಹೌದು ಸ್ವಾತಿ ಸಚ್ ದೇವ ಅವರು ಕಾಮಿಡಿ ಮಾಡುವ ಬರದಲ್ಲಿ ಸ್ವಂತ ತಾಯಿಯ ಮೇಲೆ ಅಶ್ಲೀಲ ಹಾಸ್ಯ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಮನೆಯಲ್ಲಿ ಸ್ವಾತಿ ಸಚ್‌ದೇವ ಬಳಿ ವೈಬ್ರೇಟರ್ (se*x toy) ಇರುವುದು ಗೊತ್ತಾದ ಬಳಿಕ ಅವರ ತಾಯಿ ಹೇಗೆ ಪ್ರತಿಕ್ರಿಯಿಸಿದರು ಎಂಬುದರ ಕುರಿತು ಕಾಮಿಡಿ ಮಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಡಿಯೋ ಕ್ಲಿಪ್ ಎಲ್ಲೆಡೆ ವೈರಲ್ ಆಗಿದೆ. ಕೆಲವರು ಅದನ್ನು ಹಾಸ್ಯದ ರೀತಿಯಲ್ಲಿ ಸ್ವೀಕರಿಸಿದ್ದರೆ ಮತ್ತೆ ಕೆಲವರು, ಮಿತಿ ಮೀರಿದ ಹಾಸ್ಯ ಎಂದು ಟೀಕಿಸುತ್ತಿದ್ದಾರೆ.
ಸ್ವಾತಿ ಹೇಳಿದ್ದೇನು?
ನನ್ನ ತಾಯಿ ಕೂಲ್ ಅಮ್ಮನಾಗಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಅದು ಆಗುತ್ತಿಲ್ಲ. ನನ್ನ ವೈಬ್ರೇಟರ್ ನ್ನು ( sex toy)ಅವರು ನೋಡಿದ ನಂತರ ನನಗೆ ದೊಡ್ಡ ದುರಂತವೇ ಆಯಿತು. ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ನನ್ನ ಬಳಿಗೆ ಬಂದು ಸ್ನೇಹಿತೆ ಜೊತೆಗೆ ಮಾತನಾಡುವಂತೆ ಮಾಡಿದಳು. ಆಕೆ ಖಂಡಿತವಾಗಿಯೂ ನನ್ನ ವೈಬ್ರೇಟರ್ ಕೇಳುತ್ತಾಳೆ ಅಂದುಕೊಂಡಿದ್ದೆ. ಆಕೆ ಅದನ್ನು ಗ್ಯಾಜೆಟ್, ಆಟಿಕೆ ಎನ್ನಲು ಶುರು ಮಾಡಿದರು.ನಾನು, ಅಮ್ಮಾ ಇದು ಅಪ್ಪಾನಿಗೆ ಸೇರಿದ್ದು ಅಂದೆ. ನಾನ್ ಸೆನ್ಸ್ ಆಗಿ ಮಾತನಾಡಬೇಡ, ಅವರ ಆಯ್ಕೆ ನನಗೆ ಗೊತ್ತು ಎಂದು ಹೇಳಿದರು. ತದನಂತರ ನನ್ನ ತಾಯಿ ಅದನ್ನು ಹೊರಗೆ ತಂದು ನನ್ನನ್ನು ಕೇಳಲು ಪ್ರಾರಂಭಿಸಿದರು ಎಂದು ಸ್ವಾತಿ ಸಚ್‌ದೇವಾ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ಹೇಳಿದ್ದಾರೆ.
