Home » Tukali Santhu: ಬರೀ ಕಿರಿಕಿರಿ, ಬರೀ ಸುಳ್ಳು, ಸಿನಿಮಾದಿಂದಲೇ ಕಿತ್ತು ಬಿಸಾಕಿದೆ – ತುಕಾಲಿ ಸಂತು ಅಸಲಿ ಮುಖ ಬಯಲು ಮಾಡಿದ ಖ್ಯಾತ ನಿರ್ದೇಶಕ !

Tukali Santhu: ಬರೀ ಕಿರಿಕಿರಿ, ಬರೀ ಸುಳ್ಳು, ಸಿನಿಮಾದಿಂದಲೇ ಕಿತ್ತು ಬಿಸಾಕಿದೆ – ತುಕಾಲಿ ಸಂತು ಅಸಲಿ ಮುಖ ಬಯಲು ಮಾಡಿದ ಖ್ಯಾತ ನಿರ್ದೇಶಕ !

1 comment
Tukali Santhu

Tukali Santhu: ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಕಾಮಿಡಿ ಮೂಲಕ ಎಲ್ಲರನ್ನು ನಗಿಸುವ ಪ್ರಯತ್ನ ಮಾಡ್ತಿದ್ದಾರೆ ಸಂತೋಷ್‌ ಅಲಿಯಾಸ್‌ ತುಕಾಲಿ ಸಂತು (Tukali Santhu). ಬಿಗ್‌ ಮನೆಯಲ್ಲಿ ಇವರ ವರ್ತನೆ ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೇ. ಇದೀಗ ಖ್ಯಾತ ನಿರ್ದೇಶಕ ತುಕಾಲಿ ಸಂತು ಅಸಲಿ ಮುಖ ಬಯಲು ಮಾಡಿದ್ದಾರೆ. ಹೌದು, ನಿರ್ದೇಶಕ ಏನಂದಿದ್ದಾರೆ ಗೊತ್ತಾ? ತುಕಾಲಿ ಬರೀ ಕಿರಿಕಿರಿ, ಬರೀ ಸುಳ್ಳು ಹೇಳುತ್ತಿದ್ದರು ಹಾಗಾಗಿ ಸಿನಿಮಾದಿಂದಲೇ ಕಿತ್ತು ಬಿಸಾಕಿದೆ ಎಂದಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಿದ ನಿರ್ದೇಶಕ ಯಾರು ಗೊತ್ತಾ?

ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ಯತಿರಾಜ್
ಅವರೇ ಈ ಮಾತನ್ನು ಹೇಳಿರೋದು. ಇವರು ತಮ್ಮ ಸಿನಿಮಾ ಪ್ರಚಾರದ ವೇಳೆ ಹಾಸ್ಯ ನಟ ತುಕಾಲಿ ಸಂತೋಷ್ ನೀಡಿದ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. ನಮ್ಮ ಸಿನಿಮಾ ವಿಚಾರದಲ್ಲಿ ಸಾಕಷ್ಟು ಕೈ ಕೊಟ್ಟಿದ್ದರು. ಮೊನ್ನೆ ಸುದೀಪ್ ಅವರು ಟಾಸ್ಕ್ ಕೊಡುತ್ತಾರೆ ಜೀವನದಲ್ಲಿ ತಪ್ಪು ಮಾಡಿದ್ದರೆ ಸುಳ್ಳು ಹೇಳಿದ್ದರೆ 1ರಿಂದ 10 ವರೆಗೂ ನಂಬರ್ ಕಟ್ಟಿಕೊಳ್ಳಿ ಎಂದು ಆಗ ತುಕಾಲಿ ಅವರು 2 ನಂಬರ್ ಅವರೇ ಹೇಳುತ್ತಾರೆ. ಒಬ್ಬರನ್ನು ನಗಿಸಲು ನಾನು ಸುಳ್ಳು ಹೇಳಿದ್ದೀನಿ ಅಂದ್ರು ಆದರೆ ನಮಗೆ ಅವರ ಸುಳ್ಳುಗಳು ಕೋಪ ತಂದಿದೆ. ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ವಿ. ಹೇಳಬಾರದು ಅಂದುಕೊಂಡೆ ಆದರೆ ಆ ಮನುಷ್ಯನೆ ಒಪ್ಪಿಕೊಂಡರು ಎಂದು ಯತಿರಾಜ್‌ ಹೇಳಿದ್ದಾರೆ.

25 ವರ್ಷಗಳಿಂದ ನಾನು ಮಾಧ್ಯಮದಲ್ಲಿದ್ದುಕೊಂಡು ಇಷ್ಟು ದೊಡ್ಡ ಕಲಾವಿದರನ್ನು ಸೇರಿಸಿಕೊಂಡು ಸಿನಿಮಾ ಮಾಡುತ್ತಿರುವಾಗ ಅವರೆಲ್ಲಾ ಪ್ರೋಫೆಷನಲ್ ಆಗಿ ಬದುಕುತ್ತಿರುತ್ತಾರೆ. ಈ ನಡುವೆ ತುಕಾಲಿ ಬಂದು ಬಹಳ ತೊಂದರೆ ಕೊಟ್ಟರು. ಅರ್ಧ ಸಿನಿಮಾದಿಂದ ಹೊರ ತೆಗೆದಿರುವೆ ಹಾಡಿನಲ್ಲಿ ಇರಬೇಕಿತ್ತು. ಆದರೆ ಇಲ್ಲ ಕೆಲವೊಂದು ಸೀನ್‌ಗಳಿಂದ ಡಿಲೀಟ್ ಮಾಡಿದ್ದೀವಿ. ತುಕಾಲಿನೇ ಹೇಳುತ್ತಾರೆ ನಮ್ಮನ್ನು ಅವೋಯ್ಡ್ ಮಾಡಿಬಿಡಿ ಎಂದು. ಕಥೆ ಬರೆಯುವಾಗ ಇದೆಲ್ಲಾ ಲೆಕ್ಕ ಮಾಡಿರುತ್ತೀವಾ? ಹೇಳಿಕೊಳ್ಳಲು ಬಹಳ ನೋವಾಗುತ್ತದೆ ಎಂದು ಯತಿರಾಜ್ ತುಕಾಲಿ ಕೊಟ್ಟ ತೊಂದರೆಯನ್ನು ಹೇಳಿಕೊಂಡರು.

 

ಇದನ್ನು ಓದಿ: ನಿಮ್ಮ ಪಾದಗಳಲ್ಲಿ ಈ ರೇಖೆಗಳಿದ್ರೆ ಅದೃಷ್ಟ ತಾನಾಗೇ ಹುಡುಕಿಕೊಂಡು ಬರುತ್ತೆ – ಈಗಲೇ ಚೆಕ್ ಮಾಡಿಕೊಳ್ಳಿ

You may also like

Leave a Comment