Home » Actress Samantha: ನಟಿ ಸಮಂತಾಗಾಗಿ ಗುಡಿ ಕಟ್ಟಿದ ಅಭಿಮಾನಿ!

Actress Samantha: ನಟಿ ಸಮಂತಾಗಾಗಿ ಗುಡಿ ಕಟ್ಟಿದ ಅಭಿಮಾನಿ!

0 comments

Actress Samantha: ಖ್ಯಾತ ಚಿತ್ರನಟಿ ಸಮಂತಾ ಅವರ ಅಭಿಮಾನಿಯೊಬ್ಬ ಆಂಧ್ರ ಪ್ರದೇಶದ ಏಲೂರು ಜಿಲ್ಲೆಯ ಅಲ್ಲಪಡು ಗ್ರಾಮದಲ್ಲಿ ಅವರಿಗಾಗಿ ದೇಗುಲ ನಿರ್ಮಿಸಿದ್ದಾನೆ. ಸಂದೀಪ್ ಎಂಬ ಅಭಿಮಾನಿ ತನ್ನ ಮನೆಯ ಮುಂದೆಯೇ ಗುಡಿ ಕಟ್ಟಿ, ಸಮಂತಾರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ನಿತ್ಯ ಪೂಜೆಯನ್ನೂ ಮಾಡುತ್ತಾರೆ.

ಈ ಬಗ್ಗೆ ಮಾತನಾಡಿದ ಅವರು, ‘ಸಮಂತಾ ಬಹಳ ಒಳ್ಳೆಯ ನಟಿ. ಕಷ್ಟದಲ್ಲಿರುವ ಹಲವರಿಗೆ ಸಹಾಯ ಮಾಡಿದ್ದಾರೆ. ತಮಿಳು ನಟಿಯರಿಗೆ ದೇವಾಲಯ ನಿರ್ಮಿಸಲಾಗಿದೆ. ಆದರೆ ತೆಲುಗು ನಟಿಯರಿಗೆ ದೇವಾಲಯ ನಿರ್ಮಿಸಿರಲಿಲ್ಲ. ಹಾಗಾಗಿ ಅವರಿಗಾಗಿ ನಾನು ದೇವಾಲಯ ನಿರ್ಮಿಸಿದ್ದೇನೆ’ ಎಂದಿದ್ದಾರೆ.

ಚಿತ್ರ ನಟಿಯರಾದ ಖುಷ್ಟೂ, ನಮಿತಾ, ಹನ್ಸಿಕಾ ಅವರಿಗೂ ಈ ಹಿಂದೆ ಗುಡಿ ಕಟ್ಟಿ ಜನ ಅಭಿಮಾನ ಮೆರೆದಿದ್ದರು

You may also like