Anushree Marriage: ಕನ್ನಡ ಚಿತ್ರರಂಗದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇಂದು ಬೆಳಗ್ಗೆ 10:56ಕ್ಕೆ ಬೆಂಗಳೂರಿನಲ್ಲಿ ರೋಷನ್ ಅವರು ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿ, ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಅವರ ಮದುವೆಗೆ ಸ್ಯಾಂಡಲ್ ವುಡ್ ನ ಗಣ್ಯಾತಿಗಣ್ಯರು ಆಗಮಿಸಿದ್ದಾರೆ. ಮದುವೆ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ಆದರೆ ಈ ನಡುವೆ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ ಎಂಬ ಮಾತು ಕೇಳಿ ಬಂದಿದೆ.
ಹೌದು, ಮದುವೆಗೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮದುವೆಗೆ ಆಹ್ವಾನವಿಲ್ಲದೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಸ್ಟುಡಿಯೋ ಒಳಗೆ ಬಿಟ್ಟಿಲ್ಲ ಎಂದು ಅನುಶ್ರೀ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನುಶ್ರೀ ಹೆಸರು ಮಾಡೋಕೆ ಫ್ಯಾನ್ಸ್ ಕಾರಣ. ಇವತ್ತು ನಮನ್ನೆ ಮದುವೆ ಮನೆಗೆ ಬಿಟ್ಟಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಅಂದಹಾಗೆ ಅನುಶ್ರೀ ವಿವಾಹಕ್ಕೆ ಆಮಂತ್ರಣ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ, ಅಭಿಮಾನಿಗಳನ್ನು ಆರಂಭದಲ್ಲೇ ತಡೆದು ಕಳುಹಿಸಲಾಗುತ್ತಿದೆ. ಇದರಿಂದ ಫ್ಯಾನ್ಸ್ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅನುಶ್ರೀ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು.ಈ ಕಾರಣಕ್ಕೆ ಅಭಿಮಾನಿಗಳನ್ನೂ ಒಳಗೆ ಬಿಟ್ಟರೆ ನೂಕು ನುಗ್ಗಲು ಆಗಿವ ಸಾಧ್ಯತೆ ಇರುತ್ತದೆ. ಹೀಗಾಗಿ, ಅನುಶ್ರೀ-ರೋಷನ್ ಆಮಂತ್ರಣ ಇರುವವರಿಗೆ ಮಾತ್ರ ಒಳಗೆ ಬಿಡಲು ಸೂಚನೆ ನೀಡಿದ್ದಾರೆ.
