Home » Faridabad: ಹಾಲು ಮಾರಾಟ ಮಾಡಲು ಬ್ಯಾಂಕ್‌ ಕೆಲಸವನ್ನೇ ಬಿಟ್ಟ!

Faridabad: ಹಾಲು ಮಾರಾಟ ಮಾಡಲು ಬ್ಯಾಂಕ್‌ ಕೆಲಸವನ್ನೇ ಬಿಟ್ಟ!

0 comments

Faridabad: ಹರಿಯಾಣದ ಫರೀದಾಬಾದ್‌ನ ಮೊಹಬ್ಬತಾಬಾದ್‌ ಗ್ರಾಮದ ಅಮಿತ್‌ ಭದಾನಾ ಎಂಬ ಯುವಕ ಬ್ಯಾಂಕ್‌ ಉದ್ಯೋಗ ಬಿಟ್ಟು ಆಡಿ ಕಾರಿನಲ್ಲಿ ತೆರಳಿ ಹಾಲು ಮಾರುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ನಡೆದಿದೆ.

ಅಮಿತ್‌ಗೆ ಶಿಕ್ಷಣದ ನಂತರ ಬ್ಯಾಂಕ್‌ನಲ್ಲಿ ಕೆಲಸ ದೊರಕಿತ್ತು. ಆದರೆ ಬೈಕ್‌, ಕಾರುಗಳ ಮೇಲಿನ ಅತಿಯಾದ ವ್ಯಾಮೋಹದಿಂದಾಗಿ ಆ ಉದ್ಯೋಗ ತೃಪ್ತಿ ನೀಡುತ್ತಿರಲಿಲ್ಲ. ಹಾಗಾಗಿ ತಮ್ಮ ಫ್ಯಾಷನ್‌ನನ್ನೇ ವೃತ್ತಿಯಾಗಿಸಿಕೊಳ್ಳಲು ನಿರ್ಧಾರ ಮಾಡಿದ ಅಮಿತ್‌, ಮೊದಲೇ ಅವರ ಕುಟುಂಬ ಹಾಲು ವ್ಯಾಪಾರದಲ್ಲಿ ತೊಡಗಿಕೊಂಡಿತ್ತು. ಇದನ್ನೇ ಮುಂದುವರಿಸುವ ಆಲೋಚನೆ ಬಂದಿದ್ದ ತಡ ಅಮಿತ್‌ ಕಾರು ಮತ್ತು ಬೈಕ್‌ನಲ್ಲಿಯೇ ಹಾಲು ಮಾರಾಟ ಮಾಡಬೇಕೆಂದು ನಿರ್ಧರಿಸಿದರು.

ಕೆಲಸ ತ್ಯಜಿಸಿ ಲಕ್ಞಾಂತರ ರೂ. ಮೌಲ್ಯದ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಖರೀದಿ ಮಾಡಿದರು. ಅದರ ಮೂಲಕ ಹಾಲು ಮಾರತೊಡಗಿದರು. ಹಾಲು ಮಾರಾಟ ಕೈ ಹಿಡಿದು ಆರ್ಥಿಕವಾಗಿ ಸಬಲರಾದರು.

ಕೆಲ ದಿನಗಳಲ್ಲೇ ಸುಮಾರು 1ಕೋಟಿ ರೂ. ಮೌಲ್ಯದ ಆಡಿ ಕಾರು ಖರೀದಿ ಮಾಡಿ, ಈಗ ಕಾರಿನಲ್ಲಿಯೇ ಹಾಲು ಮಾರಾಟ ಮಾಡುತ್ತಿದ್ದಾರೆ.

You may also like