2
Kadaba: ಗ್ರಾಮದ ಅಲುಂಗೂರು ತಿಮರಡ್ಡಿ ಎಂಬಲ್ಲಿ ಕೃಷಿಕರೋರ್ವರು ಹೃದಯಾಘಾತದಿಂದ ಮೃತಹೊಂದಿದ ಘಟನೆಯೊಂದು ಜ.22 (ಬುಧವಾರ) ನಡೆದಿದೆ.
ಕಾನಜೆ ಕಾಯಿ ಕೊಯ್ಯಲೆಂದು ತೋಟಕ್ಕೆ ಹೋಗಿದ್ದ ಕೃಷಿಕ ಬಜನಿಗುತ್ತು ಗಣೇಶ್ ರೈ (55) ಎಂಬುವವರು ಮೃತ ವ್ಯಕ್ತಿ. ಬೆಳಿಗ್ಗೆ ತೋಟದ ಕೆಲಸಕ್ಕೆಂದು ಹೋಗಿದ್ದ ಇವರು ಮಧ್ಯಾಹ್ನವಾದರೂ ಬರದೆ ಇದ್ದುದ್ದನ್ನು ಕಂಡು ಮನೆ ಮಂದಿ ಹುಡುಕಾಡಿದಾಗ ತೋಟದಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಕಂಡಿದ್ದಾರೆ.
ಕೂಡಲೇ ಮನೆಮಂದಿ ಕಡಬ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಹೃದಯಾಘಾತದಿಂದ ಮೃತ ಹೊಂದಿರುವುದಾಗಿ ವೈದ್ಯರು ಘೋಷಿಸಿದರು.
