Home » Farmers complaint: ಬಾವಿ ಕಳೆದು ಹೋಗಿದೆ, ಹುಡುಕಿಕೊಡಿ‌ ಎಂದು ಡಿಸಿ ಕಚೇರಿ ಮೆಟ್ಟಿಲೇರಿದ ರೈತ!

Farmers complaint: ಬಾವಿ ಕಳೆದು ಹೋಗಿದೆ, ಹುಡುಕಿಕೊಡಿ‌ ಎಂದು ಡಿಸಿ ಕಚೇರಿ ಮೆಟ್ಟಿಲೇರಿದ ರೈತ!

0 comments

Farmers complaint: ಇಲ್ಲೊಬ್ಬ ರೈತ ತನ್ನ ಜಮೀನಿನಲ್ಲಿದ್ದ ಬಾವಿ ಕಣ್ಮರೆಯಾಗಿದೆ ಎಂದು ರೈತನೊಬ್ಬ ಡಿಸಿ ಕಚೇರಿ ಮೆಟ್ಟಿಲೇರಿದ ಘಟನೆ ಮದ್ಯ ಪ್ರದೇಶದಲ್ಲಿ ನಡೆದಿದೆ.

ಹೌದು, ಮದ್ಯ ಪ್ರದೇಶದ ಬುರ್ ಹನ್ ಪುರದಲ್ಲಿ ಘಟನೆ ನಡೆದಿದ್ದು, ದೇವದಾಸ್ ರಾಥೋಡ್ ಎಂಬ ರೈತ ಗಂಭೀರ ಆರೋಪ (Farmers complaint) ಮಾಡಿದ್ದಾನೆ .

ಮಾಹಿತಿ ಪ್ರಕಾರ, ತನ್ನ ಚಿಕ್ಕಪ್ಪ ತಮ್ಮ ಗಮನಕ್ಕೆ ಬಾರದಂತೆ ಜಮೀನನ್ನ ಮಾರಿದ್ದು, ಅಲ್ಲದೇ ಇದೀಗ ತನ್ನ ಜಮೀನಿನಲ್ಲಿದ್ದ ಬಾವಿ ಕಣ್ಮರೆಯಾಗಿದೆ. ಜಮೀನಿನಲ್ಲಿ ಬಾವಿಯೇ ಇಲ್ಲ ಎಂದು ದೂರಿದ್ದಾನೆ.

ಆದ್ರೆ ರೈತ ದೇವದಾಸ್ ರಾಥೋಡ್ ಆರೋಪಗಳನ್ನ ಗಮನಿಸಿದ ಡಿಸಿ ಅಜ್ಮಿರ್ ಸಿಂಗ್ ಗಾಡ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜಮೀನಿನಲ್ಲಿ ಬಾವಿಯೇ ಇಲ್ಲ. ರಾಥೋಡ್ ರಿಜಿಸ್ಟರ್ ಬುಕ್ ನಲ್ಲಿ ಈ ಬಗ್ಗೆ ಸಮಸ್ಯೆಯಿದೆ. ತಪ್ಪು ಮಾಹಿತಿ ಉಲ್ಲೇಖವಿದೆ ಎಂದು ಹೇಳಿದ್ದಾರೆ.

You may also like

Leave a Comment