Home » Lucknow: ಪಾಕಿಸ್ತಾನ ನಾಶವಾಗುವವರೆಗೆ ಗಡ್ಡ-ಮೀಸೆ ಬೋಳಿಸುವುದಿಲ್ಲ- ರೈತನ ಪ್ರತಿಜ್ಞೆ!

Lucknow: ಪಾಕಿಸ್ತಾನ ನಾಶವಾಗುವವರೆಗೆ ಗಡ್ಡ-ಮೀಸೆ ಬೋಳಿಸುವುದಿಲ್ಲ- ರೈತನ ಪ್ರತಿಜ್ಞೆ!

0 comments

Lucknow: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ 26 ಪ್ರವಾಸಿಗರ ನರಮೇಧ ಘಟನೆಗೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಬಲ್ಲಿಯಾ ಮೂಲದ ಚುನ್ನಾ ರೈ ಎಂದು ಖ್ಯಾತಿ ಪಡೆದಿರುವ ನವೀನ್‌ ಕುಮಾರ್‌ ರೈ ಎನ್ನುವ ರೈತ, ಪಾಕಿಸ್ತಾನ ನಾಶವಾಗಬೇಕು, ನಾಶವಾಗುವವರೆಗೆ ತಾನು ಗಡ್ಡ, ಮೀಸೆ ಬೋಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ನವೀನ್‌ ಅವರು ತಮ್ಮನ್ನು ʼ ಅನಕ್ಷರಸ್ಥ ರೈತʼ ಎಂದು ಹೇಳಿಕೊಳ್ಳುತ್ತಾರೆ. ವಿವಿಧ ಕಾರಣಕ್ಕಾಗಿ ನವೀನ್‌ ಪ್ರಧಾನಿ ಮೋದಿ ಅವರಿಗೆ ಈಗಾಗಲೇ ಕೈಬರಹದಿಂದ 50 ಪತ್ರಗಳನ್ನು ಬರೆದಿದ್ದಾರೆ. ಇದಕ್ಕೆ ವೈಯಕ್ತಿಕವಾಗಿ ಪ್ರಶಂಸೆ ಸಿಕ್ಕಿದೆ.

You may also like