Home » Waqf Property: ರೈತರ ಜಮೀನು, ಹಿಂದೂ ದೇಗುಲ ಜೊತೆಗೆ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!

Waqf Property: ರೈತರ ಜಮೀನು, ಹಿಂದೂ ದೇಗುಲ ಜೊತೆಗೆ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!

0 comments

Waqf Property: ಸಕ್ಕರೆ ನಾಡು ಮಂಡ್ಯದಲ್ಲಿ ವಕ್ಫ್‌ ಆಸ್ತಿ ವಿವಾದವು ಇದೀಗ ರೈತರ ಜಮೀನು, ಹಿಂದೂ ದೇಗುಲದ ಬಳಿಕ ಸರ್ಕಾರಿ ಶಾಲೆ ಜಾಗ (Government School Land) ಮೇಲೂ ವಕ್ಫ್‌ ಬೋರ್ಡ್‌ ಕಬಳಿಕೆಗೆ ಸಿದ್ಧವಾಗಿದೆ.

ಹೌದು, ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಶಾಲೆ ಸರ್ವೆ ನಂ.215ರ 30 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ (Waqf Property) ಎಂದು ನಮೂದಾಗಿದೆ. ಸರ್ಕಾರಿ ಶಾಲೆ ಜಾಗ ಕಬಳಿಕೆಗೆ ಮುಂದಾದ ವಕ್ಫ್ ವಿರುದ್ಧ ಗ್ರಾಮಸ್ಥರು ಸರ್ಕಾರದ ವಿರುದ್ಧ ಕಿಡಿ ಕಾರಿ ರಾಜ್ಯದ ವಕ್ಫ್ ಮಂಡಳಿ ವಜಾಗೊಳಿಸಲು ಆಗ್ರಹಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಎಂಬ ಗ್ರಾಮದಲ್ಲಿ 6 ಗುಂಟೆ ವ್ಯಾಪ್ತಿಯಲ್ಲಿ ಚಿಕ್ಕಮ್ಮ ದೇವಿ ಎಂಬ ದೇವಸ್ಥಾನ ಇದೆ. ಹಲವು ವರ್ಷಗಳ ಹಿಂದೆಯೇ ಈ ದೇವಸ್ಥಾನ ಕಟ್ಟಿಸಿ ಈ ಗ್ರಾಮದ ಜನರು ಚಿಕ್ಕಮ್ಮ ದೇವಿಯನ್ನು ಪೂಜಿಸುತ್ತಾ ಬರುತ್ತಿದ್ದಾರೆ. 2023 ಜುಲೈ 17ರ ವರೆಗೆ ಈ‌ ದೇವಸ್ಥಾನದ 6 ಗುಂಟೆ ಜಾಗದ ಆರ್‌ಟಿಸಿಯಲ್ಲಿ ಬಂಜರು ಎಂದು ಉಲ್ಲೇಖವಾಗಿದೆ, ಅಂದರೆ ಇದು ಸರ್ಕಾರಿ ಜಮೀನು ಎಂದರ್ಥ. ಇನ್ನೊಂದೆಡೆ ಸಾಗುವಳಿ ಕಾಲಂನಲ್ಲಿ ಚಿಕ್ಕಮ್ಮನ ದೇವಸ್ಥಾನ ಎಂದು ಹೆಸರಿತ್ತು. ಆದರೆ ಇದೀಗ ಈ ದೇವಸ್ಥಾನ ಹಾಗೂ ಜಾಗವನ್ನು ವಕ್ಫ್ ಆಸ್ತಿ ಎಂದು ಮಾಡಲಾಗಿದೆ.

2023 ಜುಲೈ 17ರಲ್ಲಿ ಕೋರ್ಟ್ ಆದೇಶ ಎಂದು ಪಾಂಡವಪುರ ಉಪವಿಭಾಗ ಅಧಿಕಾರಿ ದೇವಸ್ಥಾನದ ಜಾಗವನ್ನು ವಕ್ಛ್ ಆಸ್ತಿ ಎಂದು ಮ್ಯುಟೇಶನ್ ಮಾಡಿದ್ದಾರೆ. ಸದ್ಯ ಗ್ರಾಮಸ್ಥರ ಗಮನಕ್ಕೆ ಬಾರದೇ ಹಿಂದೂ ದೇವಸ್ಥಾನವನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿರೋದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.

You may also like

Leave a Comment