Bagar Hukum Scheme: ಬಗರ್ ಹುಕುಂ ಯೋಜನೆಯಲ್ಲಿ ಸಲ್ಲಿಕೆಯಾಗಿರುವ ನಮೂನೆ 53 ಮತ್ತು ನಮೂನೆ 57 ರ ಅರ್ಜಿಗಳು ವಿಲೇವಾರಿಯಾಗದೇ ರೈತರ ಬೆಳೆ ನಾಶ ಮಾಡುವುದು ಅಥವಾ ಅವರನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ಮುಂದಾಗಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದಾರೆ.
ಇಂತಹ ಘಟನೆ ನಡೆದ ಕೂಡಲೇ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಶೈಲೆಂದ್ರ ಬೆಲ್ದಾಳೆ ಅವರ ಪ್ರಶ್ನೆ ಉತ್ತರ ನೀಡುತ್ತಾ ಈ ಕುರಿತು ಮಾತನಾಡಿದ್ದಾರೆ ಕಂದಾಯ ಸಚಿವರು.
ಬಗರ್ ಹುಕುಂ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳು ಇತ್ಯರ್ಥವಾಗು ಮೊದಲು ಅರ್ಜಿದಾರರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಅರ್ಜಿ ಹಾಕಿರುವ ಕಡೆ ರೈತರ ಬೆಳೆ ಕಟಾವು ಮಾಡಲು ಅಡ್ಡಿಪಡಿಸಬಾರದು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಬಗರ್ ಹುಕುಂ ಕುರಿತು ಇಷ್ಟೊಂದು ಸ್ಪಷ್ಟವಾಗಿ ಯಾವ ಸುತ್ತೋಲೆ ಕೂಡಾ ಹೊರಡಿಸಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ.
