7
AndhraPradesh: ಕಾರು ಮತ್ತು ಕಂಟೇನರ್ ನಡುವೆ ಭೀಕರ ಅಪಘಾತ ನಡೆದಿದ್ದು ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಿರುಪತಿಯ ಪುತ್ಥಲಪಟ್ಟು-ನಾಯ್ಡುಪೇಟ ರಾಷ್ಟ್ರೀಯ ಹೆದ್ದಾರಿಯ ಪಕಲಾ ಮಂಡಲದ ತೋಟಪಲ್ಲಿಯಲ್ಲಿ ನಡೆದಿದೆ.
ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎರ್ಟಿಕಾ ಕಾರಿನಲ್ಲಿ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದಿದೆ, ಕಾರಿನಲ್ಲಿದ್ದ ಐವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರ ಪೈಕಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಓರ್ವ ಮಗು ಸೇರಿ ಅಸುನೀಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
