New Delhi: ಮಳೆಯಲ್ಲಿ ಆಟವಾಡಲು ಹೊರಗೆ ಹೋಗಬೇಕೆಂದು ಒತ್ತಾಯ ಮಾಡಿದ ತನ್ನ 10 ವರ್ಷದ ಮಗನನ್ನು ಆತನ ತಂದೆಯೇ ಇರಿದು ಕೊಂದ ಘಟನೆ ದೆಹಲಿಯಲ್ಲಿ ಶನಿವಾರ ನಡೆದಿದೆ.
ಪೊಲೀಸರು ಆರೋಪಿಯನ್ನು ಬಂಧನ ಮಾಡಿ ಆಯುಧ ವಶಪಡಿಸಿಕೊಂಡಿದ್ದಾರೆ. ದಾದಾ ದೇವ್ ಆಸ್ಪತ್ರೆಯಿಂದ ಮಗುವಿಗೆ ಇರಿತದ ಗಾಯವಾಗಿದೆ ಎಂದು ಪೊಲೀಸರಿಗೆ ಕರೆ ಬಂದಿದೆ. ತನಿಖಾಧಿಕಾರಿ ಕೂಡಲೇ ಆಸ್ಪತ್ರೆಗೆ ಬಂದಾಗ ವೈದ್ಯರು ಬಾಲಕ ಸಾವಿಗೀಡಾಗಿರುವುದಾಗಿ ಘೋಷಿಸಿದ್ದಾರೆ. ಬಾಲಕನಿಗೆ ಆತನ ತಂದೆಯೇ ಇರಿದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿ ಎ ರಾಯ್ (40) ದಿನಗೂಲಿ ಕಾರ್ಮಿಕ
ಮಳೆಯಲ್ಲಿ ಆಟವಾಡಲು ಮಗು ಹಠ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಂದೆ ನಂತರ ಕೋಪಗೊಂಡು ಚಾಕು ಹಿಡಿದು ಮಗುವಿನ ಎಡ ಪಕ್ಕೆಲುಬಿಗೆ ಇರಿದಿದ್ದಾನೆ ಎನ್ನಲಾಗಿದೆ. ನಂತರ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಮಗು ಉಳಿಸಲು ಆಗಲಿಲ್ಲ. ತನ್ನ ನಾಲ್ವರು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈತನ ಪತ್ನಿ ಕೆಲವು ವರ್ಷಗಳ ಹಿಂದೆ ನಿಧನ ಹೊಂದಿದ್ದರು.
ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ
