Home » Indian Oil : ಭಾರತ- ಪಾಕ್ ಯುದ್ಧ ಭೀತಿ: ಭಾರತದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಸ್ಟಾಕ್ ಎಷ್ಟಿದೆ? ಇಂಡಿಯನ್ ಆಯಿಲ್ ನಿಂದ ಬಿಗ್ ಅಪ್ಡೇಟ್

Indian Oil : ಭಾರತ- ಪಾಕ್ ಯುದ್ಧ ಭೀತಿ: ಭಾರತದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಸ್ಟಾಕ್ ಎಷ್ಟಿದೆ? ಇಂಡಿಯನ್ ಆಯಿಲ್ ನಿಂದ ಬಿಗ್ ಅಪ್ಡೇಟ್

0 comments

Indian Oil : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದಿರುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಜೊತೆಗೆ ದಿನ ಕಳೆದಂತೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ. ಇದರ ನಡುವೆ ಜನರಿಗೆ ಪೆಟ್ರೋಲ್ ಮತ್ತು ಗ್ಯಾಸ್ ಪೂರೈಕೆಯ ಬಗ್ಗೆ ಆತಂಕ ಎದುರಾಗಿದ್ದು ಈಗಲೇ ಮನೆಯಲ್ಲಿ ಸ್ಟಾಕ್ ಮಾಡಲು ಸಾಕಷ್ಟು ಖರೀದಿ ಮಾಡುತ್ತಿದ್ದಾರೆ. ಆದರೆ ಇದೀಗ ಭಾರತದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಸ್ಟಾಕ್ ಎಷ್ಟಿದೆ ಎಂದು ಇಂಡಿಯನ್ ಆಯಿಲ್ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಹೌದು, ಜನ ಮುಗಿ ಬಿದ್ದು ಪೆಟ್ರೋಲ್, ಡಿಸೇಲ್, ಗ್ಯಾಸ್ ಖರೀದಿಗೆ ಮುಂದಾಗುತಿರುವ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಪ್ರಮುಖ ಮಾಹಿತಿಯನ್ನು ಹೊರ ಹಾಕಿದೆ. ಜನರು ಭಯಭೀತರಾಗಿ ತೈಲ ಮತ್ತು ಎಲ್‌ಪಿಜಿ ಖರೀದಿಸಬೇಡಿ ಎಂದು ಮನವಿ ಮಾಡಿದೆ. ನಮ್ಮಲ್ಲಿ ಸಾಕಷ್ಟು ತೈಲ ಸಂಗ್ರಹವಿದೆ ಮತ್ತು ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದೆ.

ಇಷ್ಟೇ ಅಲ್ಲದೆ ಮಿಲಿಟರಿ ಕ್ರಮವು ಇಂಧನ ಕೊರತೆಗೆ ಕಾರಣವಾಗಬಹುದು ಎಂದು ಜನರು ಭಯಪಡುತ್ತಾರೆ. ಆದರೆ ಯಾವುದೇ ಸಂದರ್ಭದಲ್ಲೂ ಇಂಧನ ಕೊರತೆ ಉಂಟಾಗುವುದಿಲ್ಲ ಎಂದು ಇಂಡಿಯನ್ ಆಯಿಲ್ ಭರವಸೆ ನೀಡಿದೆ. ವದಂತಿಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಕಂಪನಿ ಜನರಲ್ಲಿ ಮನವಿ ಮಾಡಿದೆ.

You may also like