Home » UIDAI: ಆಧಾರ್ ನವೀಕರಣಕ್ಕೆ ಶುಲ್ಕ ಹೆಚ್ಚಳ!!

UIDAI: ಆಧಾರ್ ನವೀಕರಣಕ್ಕೆ ಶುಲ್ಕ ಹೆಚ್ಚಳ!!

0 comments

UIDAI: ಹೆಸರು ಬದಲಾವಣೆ, ಬೆರಳಚ್ಚು ನವೀಕರಣ ಮೊದಲಾದ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ.

ಹೌದು, ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕದಂತಹ ವಿವರಗಳನ್ನು ಬದಲಾವಣೆ ಮಾಡಲು ಶುಲ್ಕವನ್ನು 50 ರೂ.ನಿಂದ 75 ರೂ.ಗೆ ಹಾಗೂ ಬೆರಳಚ್ಚು, ಕಣ್ಣಿನ ಸ್ಕ್ಯಾನ್‌, ಫೋಟೋದಂತಹ ಬಯೋಮೆಟ್ರಿಕ್‌ ವಿವರಗಳನ್ನು ಬದಲಾಯಿಸುವ ಶುಲ್ಕ 100 ರು.ನಿಂದ 125ಕ್ಕೆ ಏರಿಕೆ ಮಾಡಿರುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

ಇದನ್ನೂ ಓದಿ:Scorpion: 120 ಕೆ ಜಿ ಚಿನ್ನಕ್ಕೆ ಸಮವಂತೆ ಒಂದು ಲೀ ಚೇಳಿನ ವಿಷ!! ಯಾಕಿಷ್ಟು ಕಾಸ್ಟ್ಲಿ?

ಇನ್ನು ಹೊಸ ಆಧಾರ್ ಕಾರ್ಡ್ ಪಡೆಯುವುದು ಇನ್ನುಮುಂದೆಯೂ ಉಚಿತವಾಗಿದೆ, ಯಾವುದೇ ಶುಲ್ಕ ಇಲ್ಲ. ಆಧಾರ್ ಕೇಂದ್ರಕ್ಕೆ ಭೇಟಿ ನೀಡಲಾಗದವರಿಗೆ, ಯುಐಡಿಎಐ ಮನೆಯಲ್ಲೇ ನವೀಕರಣ ಸೇವೆಯನ್ನು ಒದಗಿಸುತ್ತದೆ. ಇದಕ್ಕೆ ಮೊಬೈಲ್ ಆಧಾರ್ ಆಯಪ್‌ ಅನ್ನು ಬಳಸಲಾಗುತ್ತದೆ. ಈ ಸೇವೆಯ ಶುಲ್ಕ 700 ರು. ಆಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

You may also like