ಕಲ್ಲಿದ್ದಲು ಸಮಸ್ಯೆಯಿಂದ ರಾಜ್ಯದಲ್ಲಿ ಪವರ್ ಕಟ್ ಭೀತಿ ಇದೆಯೆಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಇದೀಗ ಈ ಸುದ್ದಿಗೆ ಸಿಎಂ ಬೊಮ್ಮಾಯಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಕಟ್ ಇರುವುದಿಲ್ಲ. ರಾಜ್ಯದಲ್ಲಿ ಪವರ್ ಕಟ್ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ವಿದ್ಯುತ್ ಉತ್ಪಾದನೆ ಹಾಗೂ ಮಳೆಯಿಂದಾದ ಪರಿಣಾಮಗಳ ಕುರಿತು ಸಭೆ ನಡೆಸಿದ್ದೇನೆ. ಕೇಂದ್ರ ಸಚಿವರ ಭೇಟಿ ಬಳಿಕ 2 ರೇಕ್ ಕಲ್ಲಿದ್ದಲು ಬರುತ್ತಿದೆ.
ಇನ್ನೂ ಎರಡು ರೇಕ್ ಕಲ್ಲಿದ್ದಲು ಕೊಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಸ್ಥಗಿತ ಆಗದಂತೆ ನೋಡಿಕೊಳ್ಳುತ್ತೇವೆ, ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಕಟ್ ಇಲ್ಲ. ರಾಜ್ಯದಲ್ಲಿ ಪವರ್ ಕಟ್ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ 1 ರಿಂದ ಈವರೆಗೂ ಮಳೆಯ ಕಾರಣದಿಂದ 21 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ಮಳೆಯಿಂದಾದ ಹಾನಿ, ಬೆಳೆ ಹಾನಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮಳೆಯಿಂದ ಮನೆಗಳಿಗೆ ಹಾನಿಯಾದವರಿಗೂ ಪರಿಹಾರ ಕೊಡುತ್ತೇವೆ. ಬೆಳೆ ಹಾನಿಯಾದ ರೈತರಿಗೂ ಪರಿಹಾರ ನೀಡಲು ಸೂಚನೆ ಕೊಡಲಾಗಿದೆ ಎಂದು ಇದೇ ವೇಳೆ ಹೇಳಿದರು.
