2
Kashmir: ಜಮ್ಮು-ಕಾಶ್ಮೀರದ (Kashmir) ಕಿರ್ ಜಿಲ್ಲೆಯ ಛತೂವಿನ ಸಿಂಫ್‌ಪುರ ಎಂಬಲ್ಲಿ ಗುರುವಾರ ನಸುಕಿನ ಹೊತ್ತು ಉಗ್ರರ ಜೊತೆ ಭದ್ರತಾ ಪಡೆಯ ತೀವ್ರ ಕಾಳಗ ಶುರುವಾಗಿದೆ.
ಇಲ್ಲಿ 4-5 ಉಗ್ರರು ಇರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ತೀವ್ರ ಎನ್‌ಕೌಂಟರ್ ನಡೆಯುತ್ತಿದ್ದು, ಗುಂಡಿನ ಚಕಮಕಿ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಇಡೀ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿ ಭದ್ರತಾ ಪಡೆಗಳು ಸುತ್ತುವರಿದಿವೆ.
