Home » Fight in masjid: ಮಸೀದಿಯಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ: ಹಲ್ಲೆಯ ವಿಡಿಯೋ ವೈರಲ್

Fight in masjid: ಮಸೀದಿಯಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ: ಹಲ್ಲೆಯ ವಿಡಿಯೋ ವೈರಲ್

0 comments

Fight in masjid: ಉತ್ತರ ಪ್ರದೇಶದ ಮೊರಾದಾಬಾದ್‌ನ ಮಸೀದಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, ಮಸೀದಿಯೊಳಗೆ ಎರಡು ಗುಂಪುಗಳು ಹೊಡೆದಾಡುವ (Fight in masjid) ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಾಕ್ಬರಾ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಿ ಸಬ್ಜಿಪುರ್ ಗ್ರಾಮದ ದೊಡ್ಡ ಮಸೀದಿಯಲ್ಲಿ ಎರಡು ಗುಂಪುಗಳ ನಡುವೆ ಜಗಳ ಹೊಡೆದಾಟ ಆಗಿದ್ದು, ಸದ್ಯ ಜಗಳಕ್ಕೆ ಕಾರಣವಾದ ಅಂಶಗಳೇನು ಎಂಬುದು ಸ್ಪಷ್ಟವಾಗಿಲ್ಲ ಮತ್ತು ಸಂಘರ್ಷವನ್ನು ಪ್ರಚೋದಿಸಿದ ಬಗ್ಗೆ ಯಾವುದೇ ದೃಢೀಕೃತ ಮಾಹಿತಿಯಿಲ್ಲ.

ವಿಡಿಯೋದಲ್ಲಿ ಮಸೀದಿಯೊಳಗೆ ಎರಡು ಗುಂಪುಗಳು ಭೀಕರ ಜಗಳದಲ್ಲಿ ನಿರತವಾಗಿದ್ದು, ಬೆಲ್ಟ್ , ಕೋಲಿನಿಂದ ಕೈಗೆ ಸಿಕ್ಕಿದ ವಸ್ತುಗಳಿಂದ ಎದುರಾಳಿಗಳನ್ನು ಹೊಡೆಯಲಾಗಿದೆ. ಅಲ್ಲದೆ ಪರಸ್ಪರ ಬಟ್ಟೆಹಿಡಿದು ಎಳೆದಾಡಿ ಅವುಗಳನ್ನು ಹರಿದುಹಾಕಿ ಬಡಿದಾಡಿಕೊಂಡಿರುವುದು ಕಾಣಬಹುದಾಗಿದೆ.

 

 

You may also like

Leave a Comment