Home » Pakistan Flood: ಬಕೆಟ್‌ ಮತ್ತು ಟಬ್‌ಗಳಿಗೆ ಪ್ರವಾಹದ ನೀರನ್ನು ತುಂಬಿಸಿ: ಅದನ್ನು ಆಶೀರ್ವಾದವೆಂದು ಪರಿಗಣಿಸಿ – ಪಾಕ್ ರಕ್ಷಣಾ ಸಚಿವರ ವಿಡಿಯೋ ವೈರಲ್

Pakistan Flood: ಬಕೆಟ್‌ ಮತ್ತು ಟಬ್‌ಗಳಿಗೆ ಪ್ರವಾಹದ ನೀರನ್ನು ತುಂಬಿಸಿ: ಅದನ್ನು ಆಶೀರ್ವಾದವೆಂದು ಪರಿಗಣಿಸಿ – ಪಾಕ್ ರಕ್ಷಣಾ ಸಚಿವರ ವಿಡಿಯೋ ವೈರಲ್

0 comments

Pakistan Flood: ಇದೀಗ ಮಳೆ ಎಲ್ಲೆಡೆ ಅನಾಹುತ ಸೃಷ್ಟಿಸಿದೆ. ಅದರಲ್ಲೂ ನೆರೆಯ ದೇಶ ಪಾಕಿಸ್ತಾನದ ಜನರ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಒಂದೆಡೆ, ಪ್ರವಾಹದಿಂದಾಗಿ ಪಾಕಿಸ್ತಾನದ ಜನರ ಸ್ಥಿತಿ ಹದಗೆಟ್ಟಿದ್ದರೆ, ಮತ್ತೊಂದೆಡೆ, ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆ ಪಾಕ್‌ ಜನರ ಪಿತ್ತವನ್ನು ನೆತ್ತಿಗೇರಿಸಿದೆ. ಪಾಕಿಸ್ತಾನದಲ್ಲಿ ಭೀಕರ ಪ್ರವಾಹದ ನಡುವೆ, ಜನರು ಇದನ್ನು ಆಶೀರ್ವಾದವೆಂದು ಪರಿಗಣಿಸಬೇಕು ಎಂದು ದೇಶದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಅವರು ಸುದ್ದಿ ವಾಹಿನಿಯೊಂದಕ್ಕೆ, “ಈ ನೀರನ್ನು ಸಂಗ್ರಹಿಸಿ. ರಸ್ತೆಯನ್ನು ತಡೆದು ಕುಳಿತಿದ್ದ ಜನರು ಅದನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಬೇಕು. ಬಕೆಟ್ ಮತ್ತು ಟಬ್‌ಗಳಲ್ಲಿ ಸಂಗ್ರಹಿಸಿ” ಎಂದು ಹೇಳಿದ್ದಾರೆ.

ಅನೇಕ ಹಳ್ಳಿಗಳು ಮಳೆಯಿಂದ ಪ್ರವಾಹಕ್ಕೆ ಸಿಲುಕಿವೆ. ಈಗ ಅವರ ಸ್ಥಿತಿ ಹೇಗಿದೆ ಎಂದು ಊಹಿಸಿಕೊಳ್ಳಲು ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಅವರ ರಕ್ಷಣಾ ಸಚಿವರು ಈ ಪ್ರವಾಹವನ್ನು ನಾವು ಆಶೀರ್ವಾದವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರೆ, ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿರುತ್ತದೆ.

*ವೈರಲ್ ವಿಡಿಯೋದಲ್ಲಿ ಕೇಳಿದ್ದೇನು?*

ಇದೀಗ ವೈರಲ್ ಆಗುತ್ತಿರುವ ವಿಡಿಯೋ ಪಾಕಿಸ್ತಾನದ ಸುದ್ದಿ ವಾಹಿನಿಯದ್ದು. ಚಾನೆಲ್ ಪ್ರವಾಹ ಪರಿಸ್ಥಿತಿಯ ವಿಡಿಯೋ ಕ್ಲಿಪ್ ಅನ್ನು ತೋರಿಸುತ್ತಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಫೋನ್‌ನಲ್ಲಿ ಆಂಕರ್‌ ಜೊತೆ ಮಾತನಾಡುತ್ತ ಈ ಹೇಳಿಕೆ ನೀಡಿದ್ದಾರೆ. ರಸ್ತೆ ತಡೆದು ಕುಳಿತಿದ್ದ ಜನರು ಈ ಎಲ್ಲಾ ನೀರನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಸಂಗ್ರಹಿಸಬೇಕು’ ಇದರಿಂದ 8-10 ದೊಡ್ಡ ಅಣೆಕಟ್ಟುಗಳನ್ನು ಸಹ ನಿರ್ಮಿಸಬೇಕು ಎಂದು ಬೇಜಾವಬ್ದಾರಿ ಹೇಳಿಕೆ ನೀಡಿದ್ದಾರೆ.

ವೀಡಿಯೊವನ್ನು ನೋಡಿದ ನಂತರ, ಒಬ್ಬ ಬಳಕೆದಾರರು, ನೀವು ಪಾಕಿಸ್ತಾನದ ಜನರ ಆಲೋಚನೆಯನ್ನು ನೋಡುತ್ತಿದ್ದೀರಿ ಎಂದು ಕಾಮೆಂಟ್ ಮಾಡಿ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ – ಪಾಕಿಸ್ತಾನಕ್ಕೆ ಯಾವುದೇ ಆಯ್ಕೆಯಿಲ್ಲ, ಅದು ಬೇರೆ ಏನು ಮಾಡಬಹುದು. ಮೂರನೇ ಬಳಕೆದಾರರು ಬರೆದಿದ್ದಾರೆ – ಅವರ ಬುದ್ಧಿವಂತಿಕೆಯ ಬಗ್ಗೆ ಒಬ್ಬರು ಏನು ಹೇಳಬಹುದು, ಎಲ್ಲಾಕ್ಕಿಂತ ಹೆಚ್ಚಾಗಿ ಅವರು ವಿಜ್ಞಾನಿಗಳು. ನಾಲ್ಕನೇ ಬಳಕೆದಾರರು ಬರೆದಿದ್ದಾರೆ – ಪಾಕಿಸ್ತಾನದ ಬಡ ರಕ್ಷಣಾ ಸಚಿವರು ಮಾನಸಿಕ ರೋಗಿಯಾಗಿದ್ದಾರೆ ಎಂದು ಬರೆದಿದ್ದಾರೆ.

Apple Hebbal: ಬೆಂಗಳೂರಿನಲ್ಲಿ ಮೊದಲ ಸ್ಟೋ‌ರ್ ತೆರೆದ ಆ್ಯಪಲ್ – ಇಲ್ಲಿಯ 8 ಆಸಕ್ತಿದಾಯಕ ವಿಷಯಗಳು ನಿಮಗಾಗಿ

You may also like