- Mysore: ಮೈಸೂರಿನಲ್ಲಿ ಅಮಾನವೀಯ ಪ್ರಕರಣವೊಂದು ನಡೆದಿದೆ. ಕೇವಲ 1280 ರೂ. ಸಾಲ ಕಟ್ಟಿಲ್ಲ ಎನ್ನುವ ಕಾರಣಕ್ಕೆ 7 ವರ್ಷದ ಹೆಣ್ಣು ಮಗುವನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೊತ್ತೊಯ್ದ ಆರೋಪದ ಕುರಿತು ವರದಿಯಾಗಿದೆ.
ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿರುವ ಕುರಿತು ವರದಿಯಾಗಿದೆ. ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ಜೀವನ ನಡೆಸಲು ಬಜಾಜ್ ಮೈಕ್ರೋ ಫೈನಾನ್ಸ್‌ನಿಂದ 30 ಸಾವಿರ ರೂಪಾಯಿ ಸಾಲ ಮಾಡಿದ್ದರು ಎಂದು ವರದಿಯಾಗಿದೆ.
Air India: ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನದಲ್ಲಿ ದೋಷ ಇರಲಿಲ್ಲ: ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್
ದಂಪತಿ 30 ಸಾವಿರ ಸಾಲ ಪಡೆದಿದ್ದು, 13 ತಿಂಗಳು ಲೋನ್ ಕಟ್ಟಿದ್ದು ಈ ತಿಂಗಳು 4 ದಿನ ತಡವಾಗಿದ್ದಕ್ಕೆ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿ ಬಂದಿದೆ. ಫೈನಾನ್ಸ್ ಸಿಬ್ಬಂದಿ ನವೀನ್ ತಾಯಿಗೆ ಬೈದಿದ್ದು, ನಂತರ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ಅಮ್ಮ ಎಲ್ಲಿ ತೋರಿಸು ಎಂದು ಕರೆದುಕೊಂಡು ಹೋಗಿದ್ದಾರೆ.
ಮಗಳನ್ನು ಕರೆದುಕೊಂಡು ಹೋದ ವಿಷಯ ತಿಳಿದು ದಂಪತಿ ಫೈನಾನ್ಸ್ ಸಿಬ್ಬಂದಿ ಕಚೇರಿಗೆ ಬಂದಿದ್ದು, ನಂತರ ಹಣವನ್ನು ನೀಡಿ, ಹೆಣ್ಣುಮಗುವನ್ನು ಬಿಡಿಸಿಕೊಂಡು ಬಂದಿದ್ದಾರೆ.
ಈ ಪ್ರಕರಣ ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
