FIR: ದಿಯಾ ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವರ್ತೂರು ಬಳಿಯ ಕಸವನಹಳ್ಳಿ ಬಳಿಯ ಜಮೀನು ಒಡೆತನದ ವಿಚಾರಕ್ಕೆ ಸಂಬಂಧವಾಗಿ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಸಿನಾಪ್ಸೆ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ಕೃಷ್ಣ ಚೈತನ್ಯ, ಸಚಿನ್ ನಾರಾಯಣ್, ಹಾಗೂ ಸಹಚರರು ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್ 52 ರಲ್ಲಿನ 3 ಎಕರೆ 35ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಜಮೀನು ತಮಗೆ ಸೇರಿದ್ದು, ಆದರೆ ಕೃಷ್ಣ ಚೈತನ್ಯ ಹಾಗೂ ಸಹಚರರು ಬೆದರಿಸಿ, ಅವಾಚ್ಯವಾಗಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಿ ರಾಮಮೂರ್ತಿ ಎಂಬುವವರು ಬೆಳ್ಳಂದೂರು ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೃಷ್ಣ ಚೈತನ್ಯ, ರಾಮಮೂರ್ತಿ, ಸತೀಶ್, ಸುನಿಲ್, ಶಿವರಾಮರೆಡ್ಡಿ, ರಾಘವೇಂದ್ರ ಎಂಬುವವರ ವಿರುದ್ಧ ದೂರನ್ನು ನೀಡಿದ್ದಾರೆ. ದೂರು ಹಾಗೂ ಪ್ರತಿದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
Viral Video: ಕಮೋಡ್ ನಲ್ಲಿ ಕೂತು ಫ್ಲೆಶ್ ಮಾಡಿದ ಬಾಲಕ – ನೋಡೋ ನೋಡುತ್ತಿದ್ದಂತೆ ಕೊಚ್ಚಿ ಹೋಗಿಬಿಟ್ಟ !!
