Home » ಹೋಟೆಲ್‌ನಲ್ಲಿ ಭಾರೀ ಅಗ್ನಿಅವಘಡ | ಅಗ್ನಿದುರಂತಕ್ಕೆ 10 ಜನ ಸಾವು,50 ಜನ ಗಂಭೀರ ಗಾಯ!

ಹೋಟೆಲ್‌ನಲ್ಲಿ ಭಾರೀ ಅಗ್ನಿಅವಘಡ | ಅಗ್ನಿದುರಂತಕ್ಕೆ 10 ಜನ ಸಾವು,50 ಜನ ಗಂಭೀರ ಗಾಯ!

0 comments

ಕಾಂಬೋಡಿಯಾದ ಹೊಟೇಲ್‌ನಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ದುರಂತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಗೊಂಡವರಲ್ಲಿ ಹಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಹಾಗೂ ಮೃತಪಟ್ಟವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ ಎಂದು ವರದಿಯಾಗಿದೆ. ಕಾಂಬೋಡಿಯಾದಲ್ಲಿ ಈ ಅಗ್ನಿ ಆಕಸ್ಮಿಕವಾಗಿ ಸಂಭವಿಸಿದ್ದೂ, ಅಗ್ನಿ ದುರಂತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಿಲುಕಿರುವ ಜನರನ್ನು ರಕ್ಷಿಸಲು ಕಮಾಂಡೋಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ ಮತ್ತು ಬೆಂಕಿಯ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದೂ, ಸುಮಾರು 70% ರಷ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

You may also like

Leave a Comment