Home » ಚಾಮರಾಜನಗರದಲ್ಲಿ ಶಾಲೆಗೆ ಆಕಸ್ಮಿಕ ಬೆಂಕಿ : ಪಠ್ಯ ಪುಸ್ತಕ, ಡೆಸ್ಕ್, ಕೊಠಡಿ, ಕಿಟಕಿಗಳು ಭಸ್ಮ

ಚಾಮರಾಜನಗರದಲ್ಲಿ ಶಾಲೆಗೆ ಆಕಸ್ಮಿಕ ಬೆಂಕಿ : ಪಠ್ಯ ಪುಸ್ತಕ, ಡೆಸ್ಕ್, ಕೊಠಡಿ, ಕಿಟಕಿಗಳು ಭಸ್ಮ

0 comments
Fire accident in Chamarajanagar

Fire accident in Chamarajanagar: ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ಆಕಸ್ಮಿಕ ಬೆಂಕಿ(Fire accident in Chamarajanagar) ಹೊತ್ತಿಕೊಂಡ ಘಟನೆ ನಡೆದಿದೆ.

ಏಕಾಏಕಿ ಬೆಂಕಿ ಅವಘಡದಿಂದ ಚಾಮರಾಜನಗರದ ಕರ್ನಾಟಕ ಪಬ್ಲಿಕ್ ಶಾಲೆಯೊಳಗೆ ಇದ್ದ ಪಠ್ಯ ಪುಸ್ತಕ, ಡೆಸ್ಕ್, ಕೊಠಡಿ, ಕಿಟಕಿ ಬಾಗಿಲುಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸಿಗರೇಟ್ ಸೇದಿ ಶಾಲೆಯೊಳಗೆ ಕಿಡಿಗೇಡಿಗಳು ಎಸೆದಿರಬಹುದು ಎಂದು ತಿಳಿಯಲಾಗಿದೆ. ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡದಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿಯಬಹುದಾಗಿದೆ

ಇದನ್ನೂ ಓದಿ: ಠಾಣೆಗಳಲ್ಲಿ ಮಾನವೀಯತೆಗಳಿಗೆ ಪ್ರಾಶಸ್ತ್ರ ನೀಡಿ : ನೂತನ ಪೊಲೀಸ್ ಕಮೀಷನರ್ ದಯಾನಂದ್ ಖಡಕ್‌ ಎಚ್ಚರಿಕೆ

You may also like

Leave a Comment