Home » Tirupati Fire Accident: ತಿರುಮಲದಲ್ಲಿ ಅಗ್ನಿ ಅವಘಡ! ಹಲವು ದಾಖಲೆಗಳು ನಾಶ!

Tirupati Fire Accident: ತಿರುಮಲದಲ್ಲಿ ಅಗ್ನಿ ಅವಘಡ! ಹಲವು ದಾಖಲೆಗಳು ನಾಶ!

1 comment

Tirupati Fire Accident: ತಿರುಪತಿಯ ಟಿಟಿಡಿ ಆಡಳಿತ ಭವನದ ಇಂಜಿನಿಯರಿಂಗ್ ವಿಭಾಗದಲ್ಲಿ ದಟ್ಟವಾಗಿ ಬೆಂಕಿ (Tirupati Fire Accident)  ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಹಲವು ಕಡತಗಳು ಸುಟ್ಟು ಭಸ್ಮ ಆಗಿದೆ.

ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಗಿತ್ತು. ಆದರೆ ಅಷ್ಟರಲ್ಲಾಗಲೆ ದಾಖಲೆಗಳು ಸುಟ್ಟು ಕರಕಲಾಗಿದ್ದವು ಎಂದು ಹೇಳಲಾಗುತ್ತಿದೆ. ಟಿಟಿಡಿ ಆಡಳಿತ ಭವನದಲ್ಲಿ ನಡೆದ ಅಗ್ನಿ ಅವಘಡದ ಕುರಿತು ಸಹಾಯಕ ಎಂಜಿನಿಯರ್ ಭಾಸ್ಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಅಲಿಪಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ನೌಕರ ನಾಗಾರ್ಜುನ ಅವರು ಅಗ್ನಿ ಅವಘಡದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಅಗ್ನಿ ಅವಘಡದಲ್ಲಿ ಟಿಟಿಡಿ ದೇವಸ್ಥಾನಗಳಿಗೆ ಸಂಬಂಧಿಸಿದ ರಸ್ತೆ ನಿರ್ಮಾಣದ ದಾಖಲೆಗಳು ನಾಶವಾಗಿದೆ. ಜೊತೆಗೆ ತಿರುಪತಿ ದೇವಸ್ಥಾನದ ಅಧೀನದಲ್ಲಿರುವ 13 ದೇವಸ್ಥಾನಗಳ ದಾಖಲೆಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವುದು ಪ್ರಾಥಮಿಕವಾಗಿ ದೃಢಪಟ್ಟಿದೆ.

ಬೆಂಕಿ ಅವಘಡದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಲಿಪಿರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಇತರ ಸಂಚು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮುಖ್ಯವಾಗಿ ಕಡತಗಳು ಸುಟ್ಟು ಕರಕಲಾಗಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

You may also like

Leave a Comment