Home » ಭೀಕರ ಅಗ್ನಿ ದುರಂತ : ಬಸ್ ಗೆ ಬೆಂಕಿ ಹಿಡಿದು ಹಲವರು ಸಜೀವ ದಹನ

ಭೀಕರ ಅಗ್ನಿ ದುರಂತ : ಬಸ್ ಗೆ ಬೆಂಕಿ ಹಿಡಿದು ಹಲವರು ಸಜೀವ ದಹನ

by Praveen Chennavara
0 comments

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ಹಲವರು ಸಜೀವವಾಗಿ ದಹನಗೊಂಡಿರುವ ಘಟನೆ ಸಂಭವಿಸಿದೆ.

ಪಕ್ಕದ ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿಗಳು ಪ್ರವಾಸಕ್ಕೆ ಬಂದಿದ್ದು, ವಾಪಸು ಹೈದರಾಬಾದಿಗೆ ಹೋಗುವಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಗ್ನಿ ದುರಂತಕ್ಕೀಡಾದ ಬಸ್ ಎದುರಿಗೆ ಬರುತ್ತಿದ್ದ ಕ್ಯಾಂಟರ್ ಲಾರಿಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಏಳು ಮಂದಿ ಸಜೀವ ದಹನ ಶಂಕೆ

ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. 22 ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರು ಬಸ್ಸಿನಲ್ಲೇ ಸಜೀವ ದಹನವಾಗಿರುವ ಶಂಕೆ ಇದೆ.ಬೆಂಕಿಯ ಜ್ವಾಲೆಗೆ ಸಿಲುಕಿ ಗಾಯಗೊಂಡ 20ಕ್ಕೂ ಹೆಚ್ಚು ಜನರನ್ನು ನಗರದ ಯುನೈಟೆಡ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಬಸ್ಸಿನಲ್ಲಿ 9ಕ್ಕೂ ಹೆಚ್ಚು ಮಕ್ಕಳಿದ್ದರು ಎಂದು

You may also like

Leave a Comment