Home » ಬೆಳ್ಳಂಬೆಳಗ್ಗೆ ಬೆಂಕಿಗಾಹುತಿಯಾದ ಮನೆ !! | ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಒಂದೇ ಕುಟುಂಬದ ಐವರು ಸದಸ್ಯರು

ಬೆಳ್ಳಂಬೆಳಗ್ಗೆ ಬೆಂಕಿಗಾಹುತಿಯಾದ ಮನೆ !! | ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಒಂದೇ ಕುಟುಂಬದ ಐವರು ಸದಸ್ಯರು

0 comments

ಮನೆಗೆ ಬೆಂಕಿ ತಗುಲಿದ ಪರಿಣಾಮ ಒಂದೇ ಕುಟುಂಬದ ಐದು ಜನರು ಸುಟ್ಟು ಕರಕಲಾಗಿರುವ ಹೃದಯವಿದ್ರಾವಕ ಘಟನೆ ಕೇರಳದ ವರ್ಕಲಾದ ದಳವಪುರಂನಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ವರ್ಕಲಾದಲ್ಲಿ ಪ್ರತಾಪನ್ ಅವರು ತರಕಾರಿ ಮಾರಾಟಗಾರರಾಗಿದ್ದ ಪ್ರತಾಪನ್ (62), ಶೆರ್ಲಿ (53), ಅಭಿರಾಮಿ (25), ಅಖಿಲ್ (29) ಮತ್ತು ಅಭಿರಾಮಿ ಅವರ ಎಂಟು ತಿಂಗಳ ಮಗ ರಿಯಾನ್ ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬೆಂಕಿ ಕಾಣಿಸಿಕೊಂಡ ತಕ್ಷಣ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಐದು ಬೈಕ್ ಗಳು ಸುಟ್ಟುಹೋಗಿದ್ದು, ಮನೆಯಲ್ಲಿದ್ದ ಹವಾನಿಯಂತ್ರಣಗಳು ಸಹ ನಾಶವಾಗಿವೆ.

ಘಟನೆಯ ಕಾರಣದ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may also like

Leave a Comment