Home » Mangaluru: ಮಂಗಳೂರಿನ ಅಪಾರ್ಟ್‌ಮೆಂಟ್ ನಲ್ಲಿ ಬೆಂಕಿ ದುರಂತ!!

Mangaluru: ಮಂಗಳೂರಿನ ಅಪಾರ್ಟ್‌ಮೆಂಟ್ ನಲ್ಲಿ ಬೆಂಕಿ ದುರಂತ!!

0 comments

Mangaluru: ಮಂಗಳೂರಿನ (Mangaluru) ಕುದ್ರೋಳಿಯ ಶಿವಗಿರಿ ಅಪಾರ್ಟ್‌ಮೆಂಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ದುರಂತ ಕಾಣಿಸಿಕೊಂಡಿದ್ದು ಹಾನಿಯಾಗಿರುವ ಘಟನೆ ನಡೆದಿದೆ.

ಶಿವಗಿರಿ ಅಪಾರ್ಟ್‌ಮೆಂಟ್ ನ ಮೂರನೇ ಮಹಡಿಯಲ್ಲಿ ಅಗ್ನಿ ಅವಘಡ ಕಾಣಿಸಿಕೊಂಡಿದ್ದು ಸಂಪೂರ್ಣವಾಗಿ ಕಟ್ಟಡ ಹೊಗೆಯಿಂದ ಆವರಿಸಿಕೊಂಡಿತ್ತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಅಗ್ನಿ ಶಾಮಕ ದಳದವರ ಸಮಯಪ್ರಜ್ಞೆಯಿಂದ ಕಟ್ಟಡದಲ್ಲಿ ಸಿಲುಕಿದ್ದ ವೃದ್ದರೊಬ್ಬರ ರಕ್ಷಣೆ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like