Home » ಅಗ್ನಿಶಾಮಕ ಸಚಿನ್ ರಾಥೋಡ್ ಯುವತಿಯ ಬಾಳಿಗೆ ಬೆಂಕಿ ಇಟ್ಟ !

ಅಗ್ನಿಶಾಮಕ ಸಚಿನ್ ರಾಥೋಡ್ ಯುವತಿಯ ಬಾಳಿಗೆ ಬೆಂಕಿ ಇಟ್ಟ !

by Praveen Chennavara
0 comments

ವಿಜಯಪುರ: ಈತನ ಹೆಸರು ಸಚಿನ್ ರಾಥೋಡ್ ,ಉದ್ಯೋಗ ಅಗ್ನಿಶಾಮಕ..ಆದರೆ ಈತ ಮಾಡಿರೋದು ಮಾತ್ರ ಖತರ್ನಾಕ್.

ಊರಲೆಲ್ಲಾ ಬೆಂಕಿ ಬಿದ್ದರೆ ಆರಿಸೋ ಕೆಲಸ ಮಾಡುವ ಈತ ಯುವತಿಯೊಬ್ಬಳ ಬಾಳಿಗೆ ಬೆಂಕಿ ಇಡುವ ಕೆಲಸ ಮಾಡಿದ್ದಾನೆ.ಇದೀಗ ಯುವತಿ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಎದುರು ಕೂತಿದ್ದಾಳೆ.

ಸಚಿನ್ ರಾಠೋಡ್ ಉತ್ತರ ಕನ್ನಡದ ಭಟ್ಕಳ ಅಗ್ನಿಶಾಮಕ ದಳದಲ್ಲಿ ಕರ್ತವ್ಯದಲ್ಲಿದ್ದಾನೆ. ವಿಜಯಪುರದ ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿಯ ಯುವತಿಯೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ,ಪ್ರೀತಿ ಮಾಡಿ ದೈಹಿಕ ಸಂಪರ್ಕವೂ ನಡೆಸಿ ಕೊನೆಗೆ ಮೋಸ ಮಾಡಿದ್ದಾನೆ.

ದೂರು ನೀಡಿದ ಯುವತಿ ಮತ್ತು ಸಚಿನ್ ಇವರಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಸಚಿನ್ ದೈಹಿಕ ಸಂಪರ್ಕವನ್ನು ಕೂಡ ಬೆಳೆಸಿದ್ದ. ತನಗೆ ಪ್ರಮೋಷನ್ ಆದ ತಕ್ಷಣ ಮದುವೆ ಆಗುವುದಾಗಿ ಹೇಳಿ ನಂಬಿಸಿದ್ದ.

ಆದರೆ ಇತ್ತೀಚೆಗೆ ಆಕೆಯನ್ನು ದೂರ ಮಾಡುತ್ತಿರುವ ಸಚಿನ್ ‘ನೀನು ನನಗೆ ಬರೇ ಟೈಂ ಪಾಸ್. ಬೇಕಿದ್ದರೆ ಒಂದಿಷ್ಟು ಹಣ ಕೊಡುತ್ತೇನೆ’ ಎಂದು ಸಚಿನ್ ಹೇಳಿದ್ದಾನೆ. ಅಷ್ಟೇ ಅಲ್ಲದೇ, ಈತನ ಮಾತಿಗೆ ಆತನ ಕುಟುಂಬಸ್ಥರೂ ಬೆಂಬಲ ನೀಡಿದ್ದಾರೆ. ಯುವತಿ ಮಾತ್ರ ತನಗೆ ಹಣ ಬೇಡ, ಸಚಿನ್ ನೊಂದಿಗೆ ಮದುವೆ ಮಾಡಿಸಿ ಎನ್ನುತ್ತಿದ್ದಾಳೆ.

ತನಗಾದ ಅನ್ಯಾಯದ ಕುರಿತು ನೊಂದ ಯುವತಿ ಜಿಲ್ಲಾಧಿಕಾರಿ ಬಳಿ ಮೊರೆ ಹೋಗಿದ್ದು ವಿಜಯಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

You may also like

Leave a Comment