Home » Udupi: ಮಲ್ಪೆ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

Udupi: ಮಲ್ಪೆ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

0 comments

Udupi: ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟಣೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರಿನಲ್ಲಿ ನಡೆದಿದೆ.

ಕೊಡವೂರು ಗ್ರಾಮದ 17 ವರ್ಷ ಪ್ರಾಯದ ಮೇಘಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೇಘಾ ಕಿದಿಯೂರು ಶ್ಯಾಮಿಲಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಈಕೆಗೆ ಕಳೆದ ಒಂದು ವರ್ಷದಿಂದ ಪೀಡ್ಸ್ ಖಾಯಿಲೆಯಿದ್ದು, ಈ ಬಗ್ಗೆ ಉಡುಪಿ ಮಿತ್ರಾ ಆಸ್ಪತ್ರೆ ಮತ್ತು ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ಆಗಸ್ಟ್ 6 ರಂದು ಸಂಜೆ ಮನೆಯ ಎದುರು ಇರುವ ಸ್ನಾನಗೃಹದ ತಗಡು ಶೀಟಿನ ಮಾಡಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಚೂಡಿದಾರ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇದನ್ನೂ ಓದಿ: Suicide: ಕಾರು ಚಾಲಕನೊಬ್ಬ ಬಿಜೆಪಿ ಸಂಸದರ ಹೆಸರು ಬರೆದಿಟ್ಟು ಆತ್ಮಹತ್ಯೆ!

You may also like