Home » Putturu : ಎರಡನೇ ಹೆಂಡ್ತಿ ಮನೆಗೆ ನುಗ್ಗಿ ಗಂಡ ಹಾಗೂ ಮೊದಲ ಪತ್ನಿಯಿಂದ ದಾಳಿ, ಕೊಲೆ ಬೆದರಿಕೆ !!

Putturu : ಎರಡನೇ ಹೆಂಡ್ತಿ ಮನೆಗೆ ನುಗ್ಗಿ ಗಂಡ ಹಾಗೂ ಮೊದಲ ಪತ್ನಿಯಿಂದ ದಾಳಿ, ಕೊಲೆ ಬೆದರಿಕೆ !!

0 comments

Putturu : ಪುತ್ತೂರಿನ ಕೊಡಿಪ್ಪಾಡಿಯಲ್ಲಿ ಮನೆಯೊಂದಕ್ಕೆ ನುಗ್ಗಿ ನನ್ನ ಎರಡನೇ ಹೆಂಡತಿ ಮೇಲೆ ಗಂಡ ಹಾಗೂ ಮೊದಲನೆಯ ಹೆಂಡತಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.

ಕೊಡಿಪ್ಪಾಡಿ ನಿವಾಸಿ ಎಚ್‌. ಅಮೀನಾ ದೂರು ನೀಡಿದವರಾಗಿದ್ದು . “ನಾನು ಕೆ.ಎಂ. ಅಬ್ದುಲ್ಲ ಅವರನ್ನು 2019ರಲ್ಲಿ ವಿವಾಹವಾಗಿದ್ದೇನೆ.ಆದರೆ ನನ್ನ ಪತಿ ಈ ಹಿಂದೆ ಝಾರಳನ್ನು ವಿವಾಹ ಆಗಿದ್ದರು. ಈ ವಿಚಾರ ತಿಳಿಸದೆ ನನ್ನನ್ನು ಮದುವೆಯಾಗಿದ್ದಾರೆ. ಫೆ. 19ರಂದು ನನ್ನ ಪತಿ ಕೆ.ಎಂ. ಅಬ್ದುಲ್ಲಾ, ಝಾರ ಮತ್ತು ಗಝಾಲಿ ಹಾಗೂ ರೈಸ ಎಂಬವರು ಮನೆಗೆ ಪ್ರವೇಶಿಸಿ ನನ್ನನ್ನು ಹೊರಗೆ ಹೋಗುವಂತೆ ಒತ್ತಾಯಿಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಗೃಹೋಪಯೋಗಿ ಸಾಮಗ್ರಿಗಳನ್ನು ಎಸೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸದ್ಯ ಈ ಆರೋಪದಲ್ಲಿ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like