Home » ಮೀನಿನ ವ್ಯಾಪಾರಿಯ ಅಪಹರಣ | ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು

ಮೀನಿನ ವ್ಯಾಪಾರಿಯ ಅಪಹರಣ | ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು

by Praveen Chennavara
0 comments

ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ ಕೆ.ಪಿ. ಬೈಲು ನಾರ್ಶ ಎಂಬಲ್ಲಿ ಮೀನಿನ ವ್ಯಾಪಾರಿಯೊಬ್ಬರನ್ನು ಅಪರಿಚಿತರ ತಂಡಯೊಂದು ಅಪಹರಣ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕೊಲ್ನಾಡು ಗ್ರಾಮದ ಕೆ.ಪಿ. ಬೈಲು ನಾರ್ಶ ನಿವಾಸಿ ಮುಹಮ್ಮದ್ ಅನ್ಸಾರ್ (34) ಅಪಹರಣಗೊಳಗಾದ ವ್ಯಕ್ತಿಯಾಗಿದ್ದು ಈ ಬಗ್ಗೆ ಅವರ ಪತ್ನಿ ಅಪ್ಸಾ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಹಮ್ಮದ್ ಅನ್ಸಾರ್ ಮೀನಿನ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಬೇರೆ ವ್ಯವಹಾರ ಮಾಡುತ್ತೇನೆಂದು 2 ತಿಂಗಳ ಹಿಂದೆ ಕೇರಳಕ್ಕೆ ಹೋಗಿ ಬಳಿಕ ಮರಳಿ ಮನೆಗೆ ಮರಳಿದ್ದರು. ಪತ್ನಿ ಮನೆಯಲ್ಲಿ ಇಲ್ಲದ ಸಂದರ್ಭ ಮುಹಮ್ಮದ್ ಅನ್ಸಾರ್ ಅವರನ್ನು ಅಪರಿಚಿತರ ತಂಡ ಬಲವಂತವಾಗಿ ಕರೆದುಕೊಂಡು ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment