Five Tigers Death Case: ಮಲೆಮಹದೇಶ್ವರ ಬೆಟ್ಟದಲ್ಲಿ ಮರಿ ಹಾಗೂ ತಾಯಿ ಹುಲಿ ಸೇರಿ ಐದು ಹುಲಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 04 (ಇಂದು) ರಂದು ಪ್ರಾಥಮಿಕ ವರದಿ ಸಲ್ಲಿಕೆ ಮಾಡಲಾಗಿದೆ. ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಶ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದೆ. ದನದ ಮೇಲೆ ದಾಳಿ ಮಾಡಿದ್ದ ಸಿಟ್ಟಿಗೆ ಮೃತ ದನದ ಮಾಂಸಕ್ಕೆ ವಿಷ ಬೆರೆಸಿದ ಪರಿಣಾಮ ಹುಲಿಗಳು ಸಾವಿಗೀಡಾಗಿದೆ. ಇಷ್ಟು ಮಾತ್ರವಲ್ಲದೇ ಹುಲಿಗಳ ಸಾವಿಗೆ ಅಧಿಕಾರಿಗಳ ಕರ್ತವ್ಯಲೋಪ ಕೂಡಾ ಇದೆ ಎನ್ನುವ ಮಾಹಿತಿ ಬಯಲಾಗಿದೆ.
ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ ಮತ್ತು ಮೂವರು ಅಧಿಕಾರಿಗಳ ಅಮಾನತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿಸದಿರುವುದೂ ಕರ್ತವ್ಯಲೋಪ ಆಗಿದೆ. ವೇತನ ಪಾವತಿ ಮಾಡಲು ಎಪ್ರಿಲ್ ತಿಂಗಳಾಂತ್ಯಕ್ಕೆ ಹಣ ಬಿಡುಗಡೆಯಾಗಿತ್ತು. ಜೂನ್ ತಿಂಗಳಾದರೂ ವೇತನ ಪಾವತಿಸದೆ ಡಿಸಿಎಫ್‌ನಿಂದ ಕರ್ತವ್ಯಲೋಪ ಉಂಟಾಗಿದೆ. ಗಸ್ತು ಕಾರ್ಯಕ್ಕೆ ಸಿಬ್ಬಂದಿ ವೇತನ ನೀಡದಿರುವುದು ಕಾರ್ಯಕ್ಕೆ ಹಿನ್ನಡೆ ಆಗಿದೆ. ಸಕಾಲದಲ್ಲಿ ವೇತನ ಸಿಗದೆ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವ ಕುರಿತು ವರದಿಯಲ್ಲಿ ಉಲ್ಲೇಖವಾಗಿದೆ.
ಘಟನೆ ಸಂಬಂಧ ಈಗಾಗಲೇ ಇಲಾಖೆ ಮೂವರನ್ನು ಬಂಧನ ಮಾಡಿ ಜೈಲಿಗೆ ಕಳುಹಿಸಿದೆ.
ಇದನ್ನೂ ಓದಿ: Kerala: ಕೇರಳದ ಕೊಟ್ಟಾಯಂ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕುಸಿತ: ಮಹಿಳೆ ಸಾವು : ಹಲವರು ಗಂಭೀರ
