Home » Crime: ಐದು ವರ್ಷದ ಬಾಲಕಿ ಮೇಲೆ ಮಸೀದಿಯ ಮೌಲ್ವಿಯಿಂದ ಅತ್ಯಾಚಾರ!

Crime: ಐದು ವರ್ಷದ ಬಾಲಕಿ ಮೇಲೆ ಮಸೀದಿಯ ಮೌಲ್ವಿಯಿಂದ ಅತ್ಯಾಚಾರ!

0 comments

Crime: ಐದು ವರ್ಷದ ಬಾಲಕಿಯ ಮೇಲೆ ಮಸೀದಿಯ ಮೌಲ್ವಿಯೇ ಅತ್ಯಾಚಾರ ನಡೆಸಿರುವ ಘಟನೆ ಬೆಳಗಾವಿಯಲ್ಲಿ (Belagavi Crime) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 2023 ರ ಅಕ್ಟೋಬರ್ ನಲ್ಲಿ ನಡೆದಿದ್ದ ಈ ಘಟನೆ ಈಗ ಹೊರಬಿದ್ದಿದ್ದು, ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮಹಾಲಿಂಗಪುರದ ತುಫೇಲ್ ಅಹ್ಮದ್ ದಾದಾಫೀ‌ರ್(22) ಅತ್ಯಾಚಾರವೆಸಗಿದ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಆರೋಪ ಕೇಳಿಬಂದಿದ್ದರೂ ಸಹ ಭಯದಿಂದಾಗಿ ಪೋಷಕರು ದೂರು ನೀಡಲು ಹಿಂದೇಟು ಹಾಕಿದ್ದರು.

ಈ ಪ್ರಕರಣ ಬಹುತೇಕ ಮುಚ್ಚಿ ಹೋಗುವುದರಲ್ಲಿತ್ತು. ಪ್ರಭಾವಿಗಳ ಬೆದರಿಕೆಯಿಂದಾಗಿ ಪೋಷಕರೂ ಸಹ ದೂರು ದಾಖಲಿಸಲು ಹಿಂದೇಟು ಹಾಕಿದ್ದರೆನ್ನಲಾಗಿದೆ. ಕೊನೆಗೆ ಸ್ಥಳೀಯ ನಾಯಕರೊಬ್ಬರ ಬೆಂಬಲದಿಂದ ಹಿಂದೂ ಸಂಘಟನೆಯ ಮುಖಂಡರೊಬ್ಬರನ್ನು ಸಂಪರ್ಕಿಸಿದ ಪೋಷಕರು ಫೋನ್ ನಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಈ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಹಿಂದೂ ಸಂಘಟನೆಯ ಮುಖಂಡ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಬಹಿರಂಗಪಡಿಸಿದ್ದು, ಪೊಲೀಸರು ಈಗ ದೂರು ದಾಖಲಿಸಿಕೊಂಡಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿರುವ ಮುರಗೋಡ ಠಾಣೆಯ ಪೊಲೀಸರು ಫೋಕ್ಲೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Bank Account: ಯುಪಿಯ ಮೃತ ಮಹಿಳೆಯ ಬ್ಯಾಂಕ್‌ ಖಾತೆಗೆ ಕೋಟ್ಯಂತರ ರೂಪಾಯಿ ಜಮೆ – ಇದು ಶಾರುಖ್ ಖಾನ್ ಆಸ್ತಿಗಿಂತ 15,000 ಪಟ್ಟು ಹೆಚ್ಚು!

You may also like