Home » Flood: ಪ್ರವಾಹ, ನೆರೆ ಹಾವಳಿ ಬಂದಾಗ ನಿಮ್ಮನ್ನು ನೀವು ರಕ್ಷಿಸಿಕೊಲ್ಲಲು ಏನು ಮಾಡಬೇಕು?

Flood: ಪ್ರವಾಹ, ನೆರೆ ಹಾವಳಿ ಬಂದಾಗ ನಿಮ್ಮನ್ನು ನೀವು ರಕ್ಷಿಸಿಕೊಲ್ಲಲು ಏನು ಮಾಡಬೇಕು?

188 comments

Flood: ಇನ್ನೇನು ಬದುಕು ಮುಗಿಯುತ್ತೆ, ಪ್ರವಾಹ ಬರಲಿದೆ ಅನ್ನೋ ಕ್ಷಣದಲ್ಲಿ ನೀವು ಸೋಲು ಒಪ್ಪಿಕೊಳ್ಳಬಾರದು. ಹಾಗಿದ್ರೆ ಪ್ರವಾಹ, ನೆರೆ ಹಾವಳಿ (Flood) ಬಂದಾಗ ಜನರು ಏನು ಮಾಡಬೇಕು? ಇವುಗಳ ಅಪಾಯದಿಂದ ಜನರು ತಪ್ಪಿಸಿಕೊಳ್ಳುವುದು ಹೇಗೆ? ನಿಮ್ಮವರನ್ನು ನೀವು ಬದುಕಿಸಿಕೊಳ್ಳುವುದು ಹೇಗೆ ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಈಗಾಗಲೇ ಭಾರೀ ಮಳೆ, ಭೂಕುಸಿತ, ಪ್ರವಾಹಕ್ಕೆ ಕೇರಳ ವಯನಾಡು (Wayanad Landslides) ದುರಂತದಿಂದ ಹಲವು ಸಾವು ನೋವು ಸಂಭವಿಸಿದೆ . ಇತ್ತ ಕರ್ನಾಟಕದ (Karnataka) ಅಲ್ಲಲ್ಲಿ (Ankola) ಭೂ ಕುಸಿತವಾಗಿದ್ದು, ಇದರ ಜೊತೆ ಪ್ರವಾಹವೂ ರಾಜ್ಯವನ್ನು ಕಾಡುತ್ತಿದೆ.

ಹಲವಾರು ಕಡೆ ನೆರೆ ನೀರು ಮನೆಗೆ ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಅದಕ್ಕಾಗಿ ನೀವು ಮಳೆಗಾಲದಲ್ಲಿ ಪ್ರವಾಹದ ಕುರಿತಾದ ಸುದ್ದಿಗಳ ಬಗ್ಗೆ ಗಮನ ಇಡಬೇಕು, ಮುಖ್ಯವಾಗಿ ನಿಮ್ಮ ಟಿವಿ, ರೇಡಿಯೋ, ದಿನ ಪತ್ರಿಕೆ ಅಥವಾ ಇನ್ನಿತರ ಸುದ್ದಿ ಮೂಲಗಳನ್ನು ಗಮನಿಸುತ್ತಾ ಇರಬೇಕು. ಇತ್ತೀಚಿನ ಹವಾಮಾನ ವರದಿಗಳು, ಸರ್ಕಾರದ ತುರ್ತು ಸೂಚನೆಗಳನ್ನು ಕೇಳುತ್ತಲೇ ಇರಬೇಕು.

ಪ್ರವಾಹ ಬಂದಾಗ ದಾರಿ ಕಾಣದೇ ಸಂತ್ರಸ್ಥರು ಕಂಗಾಲಾಗುತ್ತಾರೆ. ನದಿ ಅಥವಾ ಪದೇ ಪದೇ ಪ್ರವಾಹಕ್ಕೆ ಒಳಗಾಗುವ ಪ್ರದೇಶದಲ್ಲಿ ನಿಮ್ಮ ಮನೆಯಿದ್ದರೆ ಈ ಬಗ್ಗೆ ಮೊದಲೇ ಯೋಚಿಸಬೇಕು. ಪ್ರವಾಹ ಬಂದಾಗ ಎಲ್ಲಿ ಹೋಗಬೇಕು ಅಂತ ನಿರ್ಧರಿಸಿ, ಪ್ರವಾಹದ ಸೂಚನೆ ಸಿಕ್ಕಿದ ತಕ್ಷಣವೇ ಹೊರಟುಬಿಡಬೇಕು.

ಇನ್ನು ನಿಮ್ಮ ಮನೆಯಲ್ಲಿ ಹೊರಾಂಗಣ ಪೀಠೋಪಕರಣಗಳನ್ನು, ಪ್ರಮುಖ ಒಳಾಂಗಣ ವಸ್ತುಗಳನ್ನು ಸಾಧ್ಯವಾದಷ್ಟು ಮೇಲಿನ ಮಹಡಿಗೆ ಸೇರಿಸಿ. ಇದು ಪ್ರವಾಹದ ಹಾನಿಯಿಂದ ಅವುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇನ್ನು ಮನೆಯಲ್ಲಿರುವ ವಿದ್ಯುತ್ ಉಪಕರಣಗಳ ಸಂಪರ್ಕ ಕಡಿತಗೊಳಿಸಿ ಮತ್ತು ನೀವು ತೇವವಾಗಿದ್ದರೆ ಅಥವಾ ನೀರಿನಲ್ಲಿ ನಿಂತಿದ್ದರೆ ವಿದ್ಯುತ್ ಉಪಕರಣಗಳನ್ನು ಮುಟ್ಟಬೇಡಿ. ಇನ್ನು ಬೆಂಕಿ ಮತ್ತು ಸ್ಫೋಟಗಳನ್ನು ತಡೆಯಲು ಮುಖ್ಯ ಸ್ವಿಚ್ ಅಥವಾ ವಾಲ್ವ್‌ನಲ್ಲಿ ನಿಮ್ಮ ಗ್ಯಾಸ್ ಮತ್ತು ವಿದ್ಯುತ್ ಅನ್ನು ಆಫ್ ಮಾಡಿ.

ನೀವು ನಿಮ್ಮ ಮನೆಯಲ್ಲಿ ಎತ್ತರದ ನೆಲದಲ್ಲಿ ಉಳಿಯಿರಿ. ಪ್ರವಾಹದ ನೀರಿನ ಮೂಲಕ ನಡೆಯುವುದನ್ನು ತಪ್ಪಿಸಿ. ಕೇವಲ 6 ಇಂಚುಗಳಷ್ಟು ಚಲಿಸುವ ನೀರು ನಿಮ್ಮನ್ನು ಮಗುಚಬಹುದು ಮತ್ತು 1 ಅಡಿ ನೀರು ನಿಮ್ಮ ವಾಹನವನ್ನು ಮುಳುಗಿಸಬಲ್ಲದು.

ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಮನೆಗೆ ಅಗತ್ಯವಿರುವ ಮೂಲಭೂತ ವಸ್ತುಗಳನ್ನು ಒಳಗೊಂಡಿರುವ ವಿಪತ್ತು ಸರಬರಾಜು ಕಿಟ್ ಇಟ್ಟುಕೊಳ್ಳಿ. ಚಂಡಮಾರುತದ ನಂತರ ಅಥವಾ ಪ್ರವಾಹ ಸಂಭವಿಸಿದ ನಂತರ ನೀವು ಸ್ವಂತವಾಗಿ ಬದುಕಬೇಕಾಗಬಹುದು. ಅಂದರೆ ಕನಿಷ್ಠ 72 ಗಂಟೆಗಳ ಕಾಲ ಉಳಿಯಲು ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊಂದಿರುವುದು ಮುಖ್ಯ.

You may also like

Leave a Comment