Home » ಕಾಡಿನಲ್ಲಿ ಏಕಾಂತದಲ್ಲಿದ್ದ ಜೋಡಿಯ ಮೇಲೆ ಹುಲಿ ದಾಳಿ | ಯುವಕನನ್ನು ಹುಲಿ ಎತ್ತಿಕೊಂಡು ಹೋಗುತ್ತಿದ್ದಂತೆ ಓಡಿ ಹೋದ ಪ್ರೇಯಸಿ

ಕಾಡಿನಲ್ಲಿ ಏಕಾಂತದಲ್ಲಿದ್ದ ಜೋಡಿಯ ಮೇಲೆ ಹುಲಿ ದಾಳಿ | ಯುವಕನನ್ನು ಹುಲಿ ಎತ್ತಿಕೊಂಡು ಹೋಗುತ್ತಿದ್ದಂತೆ ಓಡಿ ಹೋದ ಪ್ರೇಯಸಿ

by Praveen Chennavara
0 comments

ಮಹಾರಾಷ್ಟ್ರ : ನಾಗುರದ ವಾತ್ಸಾ ಅರಣ್ಯದಲ್ಲಿ ಪ್ರೇಮಿಗಳಿಬ್ಬರು ಕಾಡಿನಲ್ಲಿ ಏಕಾಂತದಲ್ಲಿದ್ದ ವೇಳೆ ಹುಲಿಯೊಂದು ದಾಳಿ ನಡೆಸಿದ ಪರಿಣಾಮ ಯುವಕ ಮೃತಪಟ್ಟು,ಯುವತಿ ಪಾರಾದ ಘಟನೆ ನಡೆದಿದೆ.

ಮಹಾರಾಷ್ಟ್ರದ ನಾಗುರದ ವಾತ್ಸಾ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಾಗ ಆ ಯುವತಿಯು ಓಡಿಹೋಗಿ ಜೀವ ಉಳಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

21 ವರ್ಷದ ಯುವಕ ತನ್ನ ಪ್ರೇಯಸಿ ಜೊತೆ ಕಾಡಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತನನ್ನು ಚೋಪ್ ನಿವಾಸಿ ಅಜಿತ್ ಸೋಮೇಶ್ವರ್ ನಾಕಾಡೆ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಆತನ ಶವ ಪತ್ತೆಯಾಗಿದ್ದು, ಮುಖ ಹಾಗೂ ಬೆನ್ನಿನ ಭಾಗವನ್ನ ಹುಲಿ ಸಂಪೂರ್ಣ ತಿಂದು ಹಾಕಿರುವುದು ಕಂಡುಬಂದಿದೆ. ಯುವತಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇಬ್ಬರು ನಗರದಿಂದ ಹೊರ ಭಾಗದ 12 ಕಿ.ಮೀಟರ್ ದೂರದ ಅರಣ್ಯಕ್ಕೆ ತೆರಳಿದ್ದಾರೆ. ಈ ವೇಳೆ ಪೊದೆಯಲ್ಲಿ ಇಬ್ಬರು ಏಕಾಂತದಲ್ಲಿದ್ದಾಗ ಏಕಾಏಕಿ ಹುಲಿ ದಾಳಿ ಮಾಡಿದೆ. ದಾಳಿಯಲ್ಲಿ ಯುವಕ ಹುಲಿ ಬಾಯಿಗೆ ಸಿಕ್ಕು ಮೃತಪಟ್ಟಿದ್ದಾನೆ. ಆದರೆ ಯುವತಿ ಅಲ್ಲಿಂದ ಓಡಿ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.

You may also like

Leave a Comment